ಯಾವುದೇ ಒಂದು ಕಂಪನಿಯ ಬೈಕ್ ಅನ್ನು ಬೇರೆ ಕಂಪನಿಯ ಬೈಕನ್ನಾಗಿ ಮಾರ್ಪಾಡು ಮಾಡಿ, ಅದನ್ನು ಓಡಿಸುವುದು ತುಂಬ ಜನ ದ್ವಿಚಕ್ರವಾಹನ ಪ್ರಿಯರ ರೂಢಿಯಾಗಿರುತ್ತದೆ. ಅದರಂತೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಬಜಾಜ್ ಪಲ್ಸರ್ 220 ಎಫ್‌ಅನ್ನು ಸುಜುಕಿ ಹಯಾಬುಸಾ ಮಾದರಿಯ ಬೈಕನ್ನಾಗಿ ಮಾರ್ಪಾಡು ಮಾಡಲಾಗಿದ್ದು, ಇದರ ಲುಕ್‌ಗೆ ಜನ ಮರುಳಾಗಿದ್ದಾರೆ.
ಬೈಕ್ ಮಾರ್ಪಾಡು ಮಾಡಲಾದ ಕುರಿತು ವಿಡಿಯೊ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ವೈರಲ್ ಆಗಿದೆ. ಬಿಟ್ಟೂ ಬೈಕ್ ಮಾಡಿಫಿಕೇಷನ್ ಎಂಬ ಮಳಿಗೆಯು ಬೈಕ್ ಮಾರ್ಪಾಡು ಮಾಡಿದ್ದು, ಬಜಾಜ್ ಪಲ್ಸರ್ 220ಎಫ್ ಬೈಕ್ ಈಗ ಸುಜುಕಿ ಹಯಾಬುಸಾದ ಬೈಕ್ ಎಂಬಂತೆಯೇ ಭಾಸವಾಗುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್‌ಗೆ ಜಡೇಜಾ ನಾಯಕರಾಗುತ್ತಿದ್ದಂತೆ ಮೀಮ್ ಗಳ ಸುರಿಮಳೆ
ಪಲ್ಸರ್ ಬೈಕ್‌ನ ಎಲ್ಲ ಬಾಡಿ ಪ್ಯಾನೆಲ್‌ಗಳನ್ನು ತೆಗೆದುಹಾಕಿ ಹೊಸ ಪ್ಯಾನೆಲ್‌ಗಳನ್ನು ಅಳವಡಿಸಲಾಗಿದೆ. ಹ್ಯಾಂಡಲ್ ಬಾರ್, ಮುಂಭಾಗದ ಹೆಡ್‌ಲ್ಯಾಂಪ್‌ಗಳನ್ನು ಸಹ ಹೊಸದಾಗಿ ಅಳವಡಿಸಲಾಗಿದೆ. ಹಯಾಬುಸಾ ಮಾದರಿಯದ್ದೇ ಸೀಟ್, ಸ್ವಿಚ್ ಗೇರ್ ಅನ್ನು ಜೋಡಿಸಲಾಗಿದೆ. ಆದರೆ, ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡದ ಕಾರಣ ಮೊದಲಿನದ್ದೇ 220 ಸಿಸಿ ಎಂಜಿನ್ ಇದೆ.
ಬೈಕ್ ಮಾರ್ಪಾಡಿಗೆ ಸುಮಾರು ಎರಡು ಲಕ್ಷ ರೂ. ಖರ್ಚಾಗಿದೆ ಎಂದು ತಿಳಿದುಬಂದಿದೆ. ಪ್ರಾಯೋಗಿಕವಾಗಿ ಬೈಕ್ ಅನ್ನು ಒಂದು ಕಂಪನಿಯಿಂದ ಬೇರೆ ಕಂಪನಿಗೆ ಮಾರ್ಪಾಡು ಮಾಡಲಾಗಿದೆ. ಭಾರತದಲ್ಲಿ ಕಂಪನಿಯ ಬೈಕ್‌ಗಳ ಮಾದರಿಗಳನ್ನು ಬೇರೆ ಕಂಪನಿಯ ಬೈಕ್ ಆಗಿ ಬದಲಾಯಿಸುವುದು ಕಾನೂನುಬಾಹಿರವಾಗಿದೆ. ಹಾಗೊಂದು ವೇಳೆ ಮಾರ್ಪಾಡು ಮಾಡಿ ಸಿಕ್ಕಿಬಿದ್ದರೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತದೆ. ಹಾಗಾಗಿ, ಬೈಕ್ ಪ್ರಿಯರು ಯಾವುದೇ ಕಾರಣಕ್ಕೂ ಬೈಕ್ ಮಾರ್ಪಾಡು ಮಾಡಬಾರದು.