alex Certify ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಜಡೇಜಾ ನಾಯಕರಾಗುತ್ತಿದ್ದಂತೆ ಮೀಮ್‌ ಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಜಡೇಜಾ ನಾಯಕರಾಗುತ್ತಿದ್ದಂತೆ ಮೀಮ್‌ ಗಳ ಸುರಿಮಳೆ

ವಿಶ್ವದ ಅಗ್ರ ಆಲ್‌ ರೌಂಡರ್‌ ಎಂದೇ ಖ್ಯಾತಿಯಾದ ಭಾರತೀಯ ಕ್ರಿಕೆಟ್‌ ತಂಡದ ರವೀಂದ್ರ ಜಡೇಜಾ ಅವರು ಐಪಿಎಲ್‌ನ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಮಹೇಂದ್ರ ಸಿಂಗ್‌ ಧೋನಿ ಅವರು 2008 ರಿಂದ ಚೆನ್ನೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ, ಈಗ ಜಡೇಜಾ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದಾರೆ.

ಆದರೆ, ಯಾವಾಗ ಜಡೇಜಾ ಅವರು ಚೆನ್ನೈ ಕ್ಯಾಪ್ಟನ್‌ ಎಂದು ಘೋಷಿಸಲಾಯಿತೋ, ಸಾಮಾಜಿಕ ಜಾಲತಾಣಗಳಲ್ಲಿ ಜಡೇಜಾ ಕುರಿತು ಸಾವಿರಾರು ಮೀಮ್‌ಗಳು ಹರಿದಾಡುತ್ತಿವೆ.

’ಏಕೆ ಗುರುತು ಸಿಗ್ಲಿಲ್ವಾ ? ಮೊದಲು ಅಷ್ಟೇನೂ ಗುರುತು ಪರಿಚಯ ಹೊಂದಿರದ, ಎಲೆಮರೆಯ ಕಾಯಿಯಂತೆ ಇದ್ದ ಆಟಗಾರನೀಗ ಸಿಎಸ್‌ಕೆ ನಾಯಕ…..’ ಎಂದು ಒಂದು ಖಾತೆಯಿಂದ ಮೀಮ್‌ ಮಾಡಲಾಗಿದೆ. ಅದರಂತೆ, ಅಮುಲ್‌ ಸಂಸ್ಥೆಯೂ ’ಚೆನ್ನೈನ ಹೊಸ ಸೂಪರ್‌ ಕಿಂಗ್‌….. ಸರ್‌ ವಿತ್‌ ಲವ್‌……’ ಎಂದು ಟ್ವೀಟ್‌ ಮಾಡಿದೆ. ಕ್ರಿಕ್‌ ಟ್ರ್ಯಾಕರ್‌ ಟ್ವಿಟರ್‌ ಖಾತೆಯಿಂದಲೂ ಮೀಮ್‌ ಮಾಡಲಾಗಿದೆ. ’ತಲಾ (ಧೋನಿ) ತಮ್ಮ ಅಸ್ತ್ರವನ್ನು ದಳಪತಿ (ಜಡೇಜಾ) ಅವರಿಗೆ ನೀಡಿದ್ದಾರೆ’ ಎಂದು ಟ್ವೀಟ್‌ ಮಾಡಲಾಗಿದೆ.

ಬಂಟ ಸಮಾಜವನ್ನು ಕೇಂದ್ರ ಹಿಂದುಳಿದ ವರ್ಗಕ್ಕೆ ಸೇರಿಸಲು ರಮಾನಾಥ್ ರೈ ಮನವಿ

ವಿಸ್ಡನ್‌ ಇಂಡಿಯಾ ಸಹ ಜಡೇಜಾ ಅವರ ಸಾಧನೆ ಕೊಂಡಾಡಿದೆ. ’2012ರಲ್ಲಿ ಸಿಎಸ್‌ಕೆ ತಂಡವು ಸೀಕ್ರೆಟ್‌ ಬಿಡ್‌ ಮೂಲಕ ಜಡೇಜಾ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು. ಈಗ ಅದೇ ಜಡೇಜಾ ಅವರು ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ’ ಎಂದು ಹೇಳಿದೆ. ರವೀಂದ್ರ ಜಡೇಜಾ ಅವರು ಜಾಗತಿಕ ಮಟ್ಟದ ಆಲ್‌ರೌಂಡರ್‌ ಆಗಿದ್ದು, ಇತ್ತೀಚೆಗೆ ಭಾರತ ತಂಡದ ಹಲವು ಸರಣಿ ಗೆಲುವಿನಲ್ಲಿ ಇವರ ಪಾತ್ರ ಹೆಚ್ಚಿದೆ. ಅದರಲ್ಲೂ, ಐಪಿಎಲ್‌ನಲ್ಲಿ ಹಲವು ವರ್ಷಗಳಿಂದ ಇವರು ಚೆನ್ನೈ ಪರ ಆಡುತ್ತಿದ್ದು, ಧೋನಿ ಆಪ್ತರಾಗಿದ್ದಾರೆ. ಹಾಗಾಗಿ ಇವರ ಹೆಸರನ್ನೇ ಧೋನಿ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.

https://twitter.com/imjadeja?ref_src=twsrc%5Etfw

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...