ಇರುವೆ ಅತ್ಯಂತ ಸಣ್ಣ ಜೀವಿಗಳು. ಇವುಗಳನ್ನು ಹತ್ತಿರದಿಂದ ಗಮನಿಸಿದರೂ ಸಹ ಅವುಗಳ ದೇಹ ರಚನೆ ನೋಡಲು ಸಾಧ್ಯವಾಗುವುದಿಲ್ಲ. ಇದೀಗ ಛಾಯಾಗ್ರಾಹಕರೊಬ್ಬರು ಇರುವೆಗಳ ಫೋಟೋವನ್ನು ಹತ್ತಿರದಿಂದ ತೆಗೆದಿದ್ದಾರೆ.
ಲಿಥೋವೇನಿಯನ್ ಮೂಲದ ಛಾಯಾಗ್ರಾಹಕ ಯುಜೆನಿಜಸ್ ಈ ಚಿತ್ರವನ್ನು 2021 ರಲ್ಲಿ ಕ್ಲಿಕ್ ಮಾಡಿದ್ದು, 2022ರ ನಿಕಾನ್ ಸ್ಮಾಲ್ ವರ್ಲ್ಡ್ ಫೋಟೋ ಮೈಕ್ರೋಗ್ರಫಿ ಸ್ಪರ್ಧೆಗೆ ಕಳುಹಿಸಿ ಕೊಟ್ಟಿದ್ದರು.
ಇದೀಗ ಈ ಚಿತ್ರದ ಛಾಯಾಗ್ರಾಹಕ ವಿಜೇತರಾಗಿ ಆಯ್ಕೆಯಾಗಿದ್ದು, ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹತ್ತಿರದಿಂದ ಇರುವೆ ಮುಖ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ.