alex Certify ರೈಲಿಗೆ ಮಹಿಳೆಯರಿಂದ ಎಲೆಕಟ್ಟುಗಳ ಲೋಡಿಂಗ್​: ಅಬ್ಬಬ್ಬಾ ಎನ್ನುವ ವಿಡಿಯೋ ನೋಡಿ ಬೆರಗಾಗೋದು ಗ್ಯಾರೆಂಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲಿಗೆ ಮಹಿಳೆಯರಿಂದ ಎಲೆಕಟ್ಟುಗಳ ಲೋಡಿಂಗ್​: ಅಬ್ಬಬ್ಬಾ ಎನ್ನುವ ವಿಡಿಯೋ ನೋಡಿ ಬೆರಗಾಗೋದು ಗ್ಯಾರೆಂಟಿ

ಮಹಿಳೆಯರು ಇಂದು ಯಾವ ಕ್ಷೇತ್ರದಲ್ಲಿಯೂ ಹಿಂದೆ ಬಿದ್ದಿಲ್ಲ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಮಹಿಳಾ ಕಾರ್ಮಿಕರು ಅದ್ಭುತ ಎನ್ನುವ ರೀತಿಯಲ್ಲಿ ಎಲೆಗಳ ಕಟ್ಟುಗಳನ್ನು ರೈಲಿನಲ್ಲಿ ಲೋಡ್ ಮಾಡುವ ವಿಡಿಯೋ ಇದಾಗಿದೆ. ಇದನ್ನು ನೋಡಿದರೆ ಒಂದು ಸಲ ತಲೆ ತಿರುಗುವುದು ಗ್ಯಾರಂಟಿ.

ಡಿಕೆ ಹರಿ ಮತ್ತು ಹೇಮಾ ಅವರು ಟ್ವಿಟರ್‌ನಲ್ಲಿ ಈ ಅಪರೂಪದ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರೈಲ್ವೆ ಪ್ಲಾಟ್‌ಫಾರ್ಮ್‌ ನೋಡಬಹುದು. ಅಲ್ಲಿ ಕೆಲವು ಮಹಿಳೆಯರು ರೈಲಿನ ಗೇಟ್‌ಗಳ ಬಳಿ ನಿಂತಿರುವುದನ್ನು ಕಾಣಬಹುದು.

ರೈಲು ನಿಲ್ಲುವ ಸೂಚನೆ ಸಿಗುತ್ತಿದ್ದಂತೆಯೇ ಮಹಿಳೆಯರು ಅದರ ಕಂಪಾರ್ಟ್‌ಮೆಂಟ್‌ನಲ್ಲಿ ಸರಕುಗಳನ್ನು ಲೋಡ್ ಮಾಡಲು ಧಾವಿಸುತ್ತಾರೆ. ಅವರ ಶ್ಲಾಘನೀಯ ವೇಗ ಮತ್ತು ಸಮಯ ನಿರ್ವಹಣೆಯು ಬೆರಗುಗೊಳಿಸುತ್ತದೆ.

ಕೆಲವೇ ಸೆಕೆಂಡುಗಳ ಕಾಲ ನಿಲ್ದಾಣದಲ್ಲಿ ರೈಲು ನಿಂತರೂ ಅಷ್ಟರ ಒಳಗೇ ಮಹಿಳೆಯರು ಚಾಕಚಕ್ಯತೆ ತೋರಿದ್ದಾರೆ. “ಸಮಯ ಮತ್ತು ಗುರಿಯ ಪರಿಪೂರ್ಣವಾದ ಅಧ್ಯಯನಕ್ಕೆ ಈ ಸ್ತ್ರೀ ಶಕ್ತಿಯನ್ನು ಶ್ಲಾಘಿಸಿ” ಎಂಬ ಶೀರ್ಷಿಕೆ ಇದಕ್ಕೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...