alex Certify ಕ್ಷೌರಕ್ಕೆ 20 ಸಾವಿರ ಡಾಲರ್‌ ಖರ್ಚು ಮಾಡ್ತಾರೆ ಈ ಸುಲ್ತಾನ್‌…! ಇವರ ಬಳಿ ಇವೆ 300 ಫೆರಾರಿ, 500 ರೋಲ್ಸ್ ರಾಯ್ಸ್‌ ಕಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಷೌರಕ್ಕೆ 20 ಸಾವಿರ ಡಾಲರ್‌ ಖರ್ಚು ಮಾಡ್ತಾರೆ ಈ ಸುಲ್ತಾನ್‌…! ಇವರ ಬಳಿ ಇವೆ 300 ಫೆರಾರಿ, 500 ರೋಲ್ಸ್ ರಾಯ್ಸ್‌ ಕಾರು

ಅಪಾರ ಸಂಪತ್ತಿನ ಒಡೆಯರು ಪ್ರಪಂಚದಲ್ಲಿ ಅನೇಕ ಜನರಿದ್ದಾರೆ. ಸುಲ್ತಾನ್ ಹಸ್ಸನಲ್‌ ಬೊಲ್ಕಿಯಾ ಇಬ್ನಿ ಒಮರ್ ಅಲಿ ಸೈಫುದ್ದೀನ್ III ಕೂಡ ಅವರಲ್ಲೊಬ್ಬರು. 1967 ರಲ್ಲಿ ತಂದೆಯ ಪದತ್ಯಾಗದ ಬಳಿಕ ಹಸ್ಸನಲ್‌, ಬ್ರೂನಿಯ ಸುಲ್ತಾನ್ ಆದರು. ಸುಮಾರು 30 ಶತಕೋಟಿ ಡಾಲರ್‌ಗಿಂತಲೂ ಅಧಿಕ ಆಸ್ತಿ ಹೊಂದಿರೋ ಕೆಲವೇ ಕೆಲವು ರಾಜರುಗಳಲ್ಲೊಬ್ಬರು ಈತ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಹಸ್ಸನಲ್ ಬೊಲ್ಕಿಯಾ, ಜುಲೈ 15, 1946 ರಂದು ಬ್ರೂನಿ ನಗರದಲ್ಲಿ ಜನಿಸಿದರು.

1967 ರಲ್ಲಿ ಬ್ರಿಟನ್‌ನ ರಾಯಲ್ ಮಿಲಿಟರಿ ಅಕಾಡೆಮಿ ಸ್ಯಾಂಡರ್ಡ್ಸ್‌ನಿಂದ ಪದವಿ ಪಡೆದರು. ಕೌಲಾಲಂಪುರದಲ್ಲಿ ಓದು ಮುಗಿಸಿ ಬ್ರಿಟನ್‌ಗೆ ಮರಳಿದ ಅವರು ಆಗಸ್ಟ್ 1968ರಲ್ಲಿ ಸುಲ್ತಾನ್ ಪದವಿಗೇರಿದರು. ಈಗಲೂ ತಮ್ಮ ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಬ್ರೂನಿ ಸುಲ್ತಾನನ ಆದಾಯದ ಮುಖ್ಯ ಮೂಲಗಳೆಂದರೆ ತೈಲ ನಿಕ್ಷೇಪಗಳು ಮತ್ತು ನೈಸರ್ಗಿಕ ಅನಿಲ. ಸುಲ್ತಾನ್ ಹಸನಲ್ ಬೊಲ್ಕಿಯಾ, ಇಸ್ತಾನಾ ನೂರುಲ್ ಇಮಾನ್ ಅರಮನೆಯಲ್ಲಿ ನೆಲೆಸಿದ್ದಾರೆ, ಇದು 2 ಮಿಲಿಯನ್ ಚದರ ಅಡಿ ವಿಶಾಲ ಪ್ರದೇಶದಲ್ಲಿದೆ.

ಹಸನಲ್ ಬೊಲ್ಕಿಯಾ ಅವರ ಅರಮನೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸೇರಿದೆ. ವಿಶ್ವದ ಅತಿದೊಡ್ಡ ಅರಮನೆ ಎನಿಸಿಕೊಂಡಿದೆ. ಅರಮನೆಯ ಗುಮ್ಮಟಕ್ಕೆ 22 ಕ್ಯಾರೆಟ್ ಚಿನ್ನದ ಲೇಪನವನ್ನು ಹಾಕಲಾಗಿದೆ. ಒಂದು ಅಂದಾಜಿನ ಪ್ರಕಾರ, ಈ ಅರಮನೆಯ ವೆಚ್ಚ 2550 ಕೋಟಿ ರೂಪಾಯಿ. ಇಲ್ಲಿ ಐದು ಈಜುಕೊಳಗಳು, 257 ಸ್ನಾನಗೃಹಗಳು ಮತ್ತು 1700 ಕ್ಕೂ ಹೆಚ್ಚು ಕೊಠಡಿಗಳಿವೆ.

ಅರಮನೆಯಲ್ಲಿ 200 ಕುದುರೆ ಲಾಯಗಳು, 110 ಗ್ಯಾರೇಜ್‌ಗಳಿವೆ. ಸುಲ್ತಾನ್ ಬೊಲ್ಕಿಯಾ ಖಾಸಗಿ ಬಳಕೆಗಾಗಿ ಬೋಯಿಂಗ್ 747 ವಿಮಾನವನ್ನು 3,000 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದಾರೆ. ಅವರ ಬಳಿ 7,000 ವಾಹನಗಳಿವೆ. ಇದರಲ್ಲಿ 300 ಫೆರಾರಿಗಳು ಮತ್ತು 500 ರೋಲ್ಸ್ ರಾಯ್ಸ್ ಸೇರಿವೆ. ಬೊಲ್ಕಿಯಾ ಖಾಸಗಿ ಮೃಗಾಲಯದ ಮಾಲೀಕರು ಕೂಡ. ಇಲ್ಲಿ 30 ಬಂಗಾಳದ ಹುಲಿಗಳಿವೆ. ಸುಲ್ತಾನ್ ತಮ್ಮ ಕ್ಷೌರಕ್ಕಾಗಿ 20000 ಅಮೆರಿಕನ್‌ ಡಾಲರ್‌ ಖರ್ಚು ಮಾಡುತ್ತಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...