alex Certify ಇದಲ್ಲವೇ ಪ್ರಕೃತಿ ವಿಸ್ಮಯ ? ಕೇವಲ 30 ನಿಮಿಷಗಳ ಅವಧಿಯಲ್ಲಿ ಬದಲಾಯ್ತು ಹವಾಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದಲ್ಲವೇ ಪ್ರಕೃತಿ ವಿಸ್ಮಯ ? ಕೇವಲ 30 ನಿಮಿಷಗಳ ಅವಧಿಯಲ್ಲಿ ಬದಲಾಯ್ತು ಹವಾಮಾನ

ಪ್ರಕೃತಿಯ ಸೌಂದರ್ಯ ಪ್ರದರ್ಶಿಸುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕೊರತೆ ಇಲ್ಲ.
ಇದೀಗ ಮುಂಬೈ ಮಾನ್ಸೂನ್​ನ ಸುಂದರವಾದ ಸಂದರ್ಭವನ್ನು ಟೈಮ್​ಲಾಪ್ಸ್​ ಮೂಲಕ ತೋರಿಸುವ ವಿಡಿಯೋ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

ಅನಂತ್​ ರೂಪನಗುಡಿ​ ಅವರು ಇದನ್ನು ಹಂಚಿಕೊಂಡಿದ್ದು, 34 ಸೆಕೆಂಡುಗಳ ಅವಧಿಯ ವಿಡಿಯೋವನ್ನು ಮುಂಬೈನ ಬಹುಮಹಡಿ ಕಟ್ಟಡದ ಕೊಠಡಿಯಿಂದ ತೆಗೆದುಕೊಳ್ಳಲಾಗಿದೆ.

ವಿಡಿಯೋ ಕಪ್ಪು ಮೋಡಗಳ ದೃಶ್ಯಗಳೊಂದಿಗೆ ಪ್ರಾರಂಭವಾಗುತ್ತದೆ. ಕೆಲವೇ ಸೆಕೆಂಡುಗಳಲ್ಲಿ, ಭಾರೀ ಮಳೆಯೊಂದಿಗೆ ಪ್ರದೇಶವು ರಿಫ್ರೆಶ್​ ಆಗುತ್ತದೆ. ಮೋಡಗಳು ಹೊರಬಂದ ನಂತರ, ಆಕಾಶವು ಸಂಪೂರ್ಣವಾಗಿ ಶುದ್ಧವಾದಂತೆ ಕಾಣುತ್ತದೆ.

” ಮುಂಬೈನಲ್ಲಿ ಭಾನುವಾರ 4.30 ರ ಸುಮಾರಿಗೆ ಏನಾಯಿತು ಎಂಬುದು ಈ 34 ಸೆಕೆಂಡುಗಳ ವಿಡಿಯೋ!” ಎಂಬ ಶೀರ್ಷಿಕೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...