ಜಗತ್ತಿನ ಅತ್ಯಂತ ಹಳೆಯ ದ್ವಿಚಕ್ರ ವಾಹನ ಉತ್ಪಾದಕರಲ್ಲಿ ಒಂದಾದ ರಾಯಲ್ ಎನ್‌ಫೀಲ್ಡ್‌ನ ರೆಟ್ರೋ ಮತ್ತು ಕ್ಲಾಸಿಕ್ ಶೈಲಿಯ ಬೈಕ್‌ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಅವುಗಳದ್ದೇ ಟ್ರೆಂಡ್ ಇದೆ.
ಬ್ರಾಂಡ್‌ನ ಫ್ಲಾಗ್‌ಶಿಪ್‌ನಲ್ಲಿ ಇಂಟರ್ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650ಯಂಥ ಬೈಕ್‌ಗಳಿದ್ದರೂ ಸಹ ಕ್ಲಾಸಿಕ್ ಮತ್ತು ಬುಲೆಟ್ ಸೀರೀಸ್ ಬೈಕುಗಳೇ ದೇಶದ ಜನಮಾನಸದಲ್ಲಿ ಹೆಚ್ಚಿನ ಪ್ರೀತಿಗೆ ಪಾತ್ರವಾಗಿವೆ.
ರಾಯಲ್ ಎನ್‌ಫೀಲ್ಡ್‌ನ ಬೈಕ್‌ಗಳು ಸ್ಟೈಲಿಷ್ ಆಗಿ ಮಾರ್ಪಾಡಾದ ಅನೇಕ ನಿದರ್ಶನಗಳನ್ನು ಕಂಡಿದ್ದೇವೆ. ಇದೀಗ ಇಂಟರ್ಸೆಪ್ಟರ್ 650 ಬೈಕೊಂದು ಸಂಪೂರ್ಣ ಕಪ್ಪು ಥೀಂನಲ್ಲಿ ಮಾರ್ಪಾಡಿಗೆ ಒಳಗಾಗಿದ್ದು, ಇನ್‌ಸ್ಟಾಗ್ರಾಂನಲ್ಲಿ ಇದರ ಚಿತ್ರ ಪೋಸ್ಟ್ ಮಾಡಲಾಗಿದೆ. ಉಕ್ಕಿನ ರಿಮ್‌ಗಳು, ಸಂಪೂರ್ಣ ಕಪ್ಪು ಫಿನಿಶಿಂಗ್‌ನ ಚಕ್ರಗಳು, ಗೇಯ್ಟರ್‌ಗಳು, ಕಪ್ಪು ಬಣ್ಣದ ಮುಂಬದಿ ಫೋರ್ಕ್‌ಗಳನ್ನು ಈ ಬೈಕ್ ಹೊಂದಿದೆ.
ಗೋವಿಂದ ಬರುತ್ತಿದ್ದಂತೆ ಭಾವುಕರಾಗಿ ಕಣ್ಣೀರಿಟ್ಟ ರಣವೀರ್ ಸಿಂಗ್
ಸ್ಟಾಕ್ ಫೆಂಡರ್‌ಗಳ ಬದಲಿಗೆ ಕಸ್ಟಮ್ ಫೆಂಡರ್‌ಗಳನ್ನು ನೋಡಬಹುದಾಗಿದೆ. ಹ್ಯಾಂಡಲ್‌ಬಾರ್‌ಗಳಿಗೂ ಒಂದಷ್ಟು ಮಾರ್ಪಡುಗಳನ್ನು ಮಾಡಲಾಗಿದೆ. ಕ್ಲಚ್ ಮತ್ತು ಫ್ರಂಟ್ ಬ್ರೇಕ್ ಲಿವರ್‌ಗಳನ್ನು ಸಹ ಬದಲಿಸಲಾಗಿದೆ.
ರಾಯಲ್ ಎನ್‌ಫೀಲ್ಡ್ ಇತ್ತೀಚೆಗಷ್ಟೇ ತನ್ನ 120ನೇ ವರ್ಷಾಚರಣೆ ಪ್ರಯುಕ್ತ ಇಂಟರ್ಸೆಪ್ಟರ್ 650ಯ ವಾರ್ಷಿಕ ಅವತರಣಿಕೆಗಳನನ್ನು ಇಐಸಿಎಂಎ 2021ರಲ್ಲಿ ಬಿಡಗಡೆ ಮಾಡಿತ್ತು.
2022ರಲ್ಲಿ 650 ಕ್ರೂಸರ್ ಹಾಗೂ ಇನ್ನೆರಡು ಬೈಕ್‌ಗಳನ್ನು ಬಿಡುಗಡೆ ಮಾಡುವ ಪ್ಲಾನ್ ಸಹ ರಾಯಲ್ ಎನ್‌ಫೀಲ್ಡ್‌ಗೆ ಇದೆ.