alex Certify ಗೋವಿಂದ ಬರುತ್ತಿದ್ದಂತೆ ಭಾವುಕರಾಗಿ ಕಣ್ಣೀರಿಟ್ಟ ರಣವೀರ್‌ ಸಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋವಿಂದ ಬರುತ್ತಿದ್ದಂತೆ ಭಾವುಕರಾಗಿ ಕಣ್ಣೀರಿಟ್ಟ ರಣವೀರ್‌ ಸಿಂಗ್

’83’ ಚಿತ್ರದಲ್ಲಿ ತಮ್ಮ ನಟನೆಗಾಗಿ ಸಿಗುತ್ತಿರುವ ಭಾರೀ ಪ್ರಶಂಸೆಗಳಿಂದ ಸುದ್ದಿಯಲ್ಲಿರುವ ನಟ ರಣವೀರ್‌ ಸಿಂಗ್ ತಮ್ಮ ಪಾಲಿನ ಆರಾಧ್ಯ ನಟ ಗೋವಿಂದರನ್ನು ಭೇಟಿಯಾದ ಘಳಿಗೆಯಲ್ಲಿ ಭಾವುಕರಾಗಿದ್ದಾರೆ.

ಹೊಸ ವರ್ಷದ ಪ್ರಯುಕ್ತ ಆಯೋಜಿಸಲಾಗಿದ್ದ ’ದಿ ಬಿಗ್ ಪಿಕ್ಚರ್‌’ ಕಾರ್ಯಕ್ರಮದಲ್ಲಿ 90ರ ದಶಕದಲ್ಲಿ ಜನಪ್ರಿಯರಾಗಿದ್ದ ನಟ ಗೋವಿಂದ ಆಗಮಿಸಿದ್ದರು. ಈ ವೇಳೆ ವೇದಿಕೆಯಲ್ಲಿದ್ದ ನಟ ರಣವೀರ್‌ ಸಿಂಗ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಗೋವಿಂದ ಬರುತ್ತಿದ್ದಂತೆ ತಲೆಬಾಗಿದ ರಣವೀರ್‌ ಸಿಂಗ್ ಆತನಿಗೆ ಗೌರವ ಸಲ್ಲಿಸಿದರು.

’ರಾಜಾ ಬಾಬು’ ಚಿತ್ರದ ಗೆಟಪ್‌ನಲ್ಲಿದ್ದ ಇಬ್ಬರೂ ನಟರು, ಆ ಚಿತ್ರದ ಕೆಲವೊಂದು ಝಲಕ್‌ಗಳನ್ನು ಮರುಸೃಷ್ಟಿಸಿದ್ದಾರೆ. 2014ರ ಚಿತ್ರ ’ಕಿಲ್‌/ದಿಲ್‌’ನಲ್ಲಿ ಗೋವಿಂದ ಜೊತೆಗೆ ರಣವೀರ್‌ ಸಿಂಗ್ ತೆರೆ ಹಂಚಿಕೊಂಡಿದ್ದಾರೆ.

ತಮ್ಮ ಅತಿ ದೊಡ್ಡ ಪ್ರೇರಣೆಯಾಗಿರುವ ಗೋವಿಂದ ತಮ್ಮ ಪಾಲಿಗೆ ದೇವರಿದ್ದಂತೆ ಎಂದು ರಣವೀರ್‌ ಸಿಂಗ್ ಆ ಚಿತ್ರದ ಪ್ರಚಾರದ ವೇಳೆ ತಿಳಿಸಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...