ಬೋಸ್ಟನ್ ಪೊಲೀಸ್ ಇಲಾಖೆಯ ಬಂದರು ಗಸ್ತು ಘಟಕದ ಅಧಿಕಾರಿಗಳು ತೊಂದರೆಯಲ್ಲಿರುವ ಬೋಟರ್ಗಳಿಗೆ ಆಗಾಗ್ಗೆ ಸಹಾಯ ಮಾಡುತ್ತಿರುತ್ತಾರೆ. ಆದರೆ ಕಳೆದ ವಾರಾಂತ್ಯದಲ್ಲಿ ತನ್ನ ಮದುವೆಯನ್ನು ಮಿಸ್ ಮಾಡಿಕೊಳ್ಳುವ ಅಪಾಯದಲ್ಲಿದ್ದ ವರನನ್ನು ಈ ಪೊಲೀಸರು ನೆರವಾಗಿ ಮದುವೆ ನಿರ್ವಿಘ್ನವಾಗಿ ನೆರವೇರಲು ಕಾರಣರಾಗಿದ್ದಾರೆ.
ಪ್ಯಾಟ್ರಿಕ್ ಮಹೋನಿ ಎಂಬುವರು ಶನಿವಾರ ಬೋಸ್ಟನ್ ಬಂದರಿನ ಮಧ್ಯದಲ್ಲಿರುವ ಥಾಂಪ್ಸನ್ ದ್ವೀಪದಲ್ಲಿ ಮದುವೆಯಾಗಲು ನಿರ್ಧರಿಸಿದ್ದರು, ಆದರೆ ವಧು ಕಾಯುತ್ತಿದ್ದ ದ್ವೀಪಕ್ಕೆ ಅವರನ್ನು ಕರೆದೊಯ್ಯಬೇಕಿದ್ದ ದೋಣಿ ಕೆಟ್ಟುಹೋಯಿತು.
ವರ, ಫೋಟೋಗ್ರಾರ್, ಡಿಜೆ ಮತ್ತು ಹೂವಿನ ವ್ಯವಸ್ಥೆ ಸಹ ಮದುವೆ ಸ್ಥಳಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ. ಕೊನೆಗೆ ಹನ್ನೆರಡಕ್ಕೂ ಹೆಚ್ಚು ಜನರನ್ನು ಪೋಲೀಸ್ ದೋಣಿಯಲ್ಲಿ ದ್ವೀಪಕ್ಕೆ ಸಾಗಿಸಲಾಯಿತು. ಹೀಗಾಗಿ ಹನ್ನಾ ಕ್ರಾಫೋರ್ಡ್ ಅವರೊಂದಿಗಿನ ಮಹೋನಿಯ ಮದುವೆಯು ನಿಗದಿತ ರೀತಿಯಲ್ಲಿ ಮುಂದುವರಿಯಿತು.
ಪೊಲೀಸ್ ಇಲಾಖೆಯು ತನ್ನ ಈ ಕಾರ್ಯವನ್ನು ವಿವರವಾಗಿ ತಿಳಿಸಿ ತನ್ನ ಕರ್ತವ್ಯದ ಬಗ್ಗೆ ಹೆಮ್ಮೆಪಟ್ಟುಕೊಂಡಿದೆ. ವರನಿಗೆ ನೆರವಾದ ಪೊಲೀಸ್ ಅಧಿಕಾರಿಯ ಜತೆಗೆ ನವ ದಂಪತಿ ಫೋಟೋ ತೆಗೆಸಿಕೊಂಡಿದ್ದು, ಅದನ್ನೂ ಸಹ ಪೊಲೀಸ್ ಇಲಾಖೆ ಶೇರ್ ಮಾಡಿದೆ.