ಎಲ್ಲರ ಆಹಾರ ಸುರಕ್ಷತೆ ಖಾತರಿ ಮಾಡುವುದು ಸಿಖ್ ಸಮುದಾಯದ ಆದ್ಯತೆ. ಆಹಾರದ ವಿಚಾರದಲ್ಲಿ ನೆರವಿನ ಹಸ್ತ ಚಾಚಲು ಅವರು ಸದಾ ಸಿದ್ಧ. ಜಗತ್ತಿನ ಯಾವುದೇ ಭಾಗದಲ್ಲಿ ವಿಪತ್ತು ಉಂಟಾದರೂ ಸರಿ, ಆಹಾರ ಮತ್ತು ನಿತ್ಯ ಅಗತ್ಯಗಳನ್ನು ಪೂರೈಸುವಲ್ಲಿ ಸಿಖ್ ಸಮುದಾಯ ಮುಂದೆಯೇ ಇರುವುದು ವೇದ್ಯ ವಿಚಾರ.
ಕರಸೇವೆ ಎಂಬ ಪದಕ್ಕೆ ಚಿಕ್ಕ ಸೇವೆ, “ನಿಸ್ವಾರ್ಥ ಸೇವೆ”, ಯಾವುದೇ ಪ್ರತಿಫಲ ಅಥವಾ ವೈಯಕ್ತಿಕ ಪ್ರಯೋಜನದ ಆಲೋಚನೆಯಿಲ್ಲದೆ ಮಾಡಿದ ಕೆಲಸ ಅಥವಾ ಸೇವೆ ಎನ್ನುವ ಅರ್ಥವಿದೆ. ಪಂಜಾಬಿ ಭಾಷೆಯಲ್ಲಿ, ಅಂತಹ ಸೇವೆ ಸಲ್ಲಿಸುವ ವ್ಯಕ್ತಿಯನ್ನು ‘ಸೇವಾದರ್’ ಎನ್ನುತ್ತಾರೆ.
ಸಾಮೂಹಿಕ ಊಟ ಮತ್ತು ವಿತರಣಾ ಸೇವೆಗಳನ್ನು ಸಂಘಟಿಸಲು ಒಬ್ಬ ವ್ಯಕ್ತಿಗೆ ಸಾಧ್ಯವಾಗದಿದ್ದರೂ, ಇತರರಲ್ಲಿ ಸಂತೋಷ ಮತ್ತು ಭರವಸೆಯ ಭಾವನೆಯನ್ನು ಉಂಟುಮಾಡುವ ಸರಳ ಕಾರ್ಯಗಳು ಉನ್ನತ ಪ್ರಯೋಜನ ನೀಡಬಹುದು. ಅಮೆರಿಕದ ಫೀನಿಕ್ಸ್‌ನ ಗ್ಯಾಸ್ ಸ್ಟೇಷನ್ ಮಾಲೀಕ ಜಸ್ವೀಂದರ್ ಸಿಂಗ್ ಅವರು ತಮ್ಮ ಸ್ಥಳೀಯ ಸಮುದಾಯಕ್ಕೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.
ಮೆಟ್ರೋದಲ್ಲೇ ಮಹಿಳೆಗೆ ಕಿರುಕುಳ: ಕಿಕ್ಕಿರಿದ ರೈಲಲ್ಲಿ ಮೈಮುಟ್ಟಿ ಅನುಚಿತ ವರ್ತನೆ
‘ಗ್ರಾಹಕರಿಗೆ ಮತ್ತು ನನ್ನ ಸಮುದಾಯದ ಹೊರೆ ತಗ್ಗಿಸುವುದಕ್ಕಾಗಿ’ ಎನ್ನುತ್ತ ಭಾರಿ ಕಡಿಮೆ ಬೆಲೆಗೆ ಗ್ಯಾಸ್ ಮಾರಾಟ ಮಾಡುತ್ತಿದ್ದಾರೆ ಸಿಂಗ್. ಮಾರ್ಚ್‌ನಲ್ಲೇ ಇಂಧನವನ್ನು ಖರೀದಿಸಿದ ಬೆಲೆಗಿಂತ 10 ಸೆಂಟ್ಸ್ ಕಡಿಮೆಗೆ ಮಾರಾಟ ಮಾಡುತ್ತಿದ್ದರು. ಪ್ರಸ್ತುತ ಅನಿಲವನ್ನು ಗ್ಯಾಲನ್‌ಗೆ $5.19ರ ದರದಲ್ಲಿ ಮಾರುತ್ತಿದ್ದಾರೆ. ಖರೀದಿ ಬೆಲೆಗಿಂತ 47 ಸೆಂಟ್ಸ್ ಅಗ್ಗ ಇದು. ಪೆಟ್ರೋಲ್ ಬಂಕ್‌ನಲ್ಲಿ ಎದುರಿಸುತ್ತಿರುವ ಈ ನಷ್ಟವನ್ನು ಸರಿದೂಗಿಸಲು ಅವರು ಮತ್ತು ಅವರ ಪತ್ನಿ ಹೆಚ್ಚಿನ ಸಮಯ ಕೆಲಸ ಮಾಡುತ್ತಿದ್ದಾರೆ.
ದಿನಕ್ಕೆ $500 ಕಳೆದುಕೊಳ್ಳುತ್ತಿದ್ದರೂ, ಈ ಬಗ್ಗೆ ವಿಷಾದವಿಲ್ಲ. ಸದ್ಯ ಜನರ ಬಳಿ ಹಣವಿಲ್ಲ. ನಮ್ಮ ಬಳಿ ಏನಾದರೂ ಇದೆ ಎಂದಾದರೆ ನೆರವು ನೀಡುವುದಕ್ಕೆ ನನ್ನ ತಾಯಿ ಮತ್ತು ನನ್ನ ತಂದೆ ನಮಗೆ ಕಲಿಸಿದ್ದಾರೆ. ದೇವರು ನನಗೆ ಸಹಾಯ ಮಾಡಿದ್ದಾನೆಂಬುದು ವಿಚಾರವಲ್ಲ. ಈಗ ಹಣ ಸಂಪಾದಿಸುವ ಸಮಯವಲ್ಲ. ಈಗ ಇತರರಿಗೆ ನೆರವಾಗುವ ಸಮಯ ಎಂದು ಸಿಂಗ್ ಹೇಳುತ್ತಾರೆ.