ಬಿಹಾರದ ದರ್ಭಾಂಗಾ ಜಿಲ್ಲೆಯ ಕ್ಷೌರದಂಗಡಿ ಮಾಲೀಕನೊಬ್ಬ ಕೋವಿಡ್ ಲಸಿಕೆಯನ್ನ ಸ್ವೀಕರಿಸಿದವರಿಗೆ ಉಚಿತ ಹೇರ್ ಕಟ್ ಹಾಗೂ ಶೇವಿಂಗ್ ಮಾಡಿಕೊಡುವ ಆಫರ್ ನೀಡಿದ್ದಾರೆ.
ಸಕ್ರಿಯ ರಾಜಕಾರಣದಿಂದ ಆಧ್ಯಾತ್ಮಿಕ ಲೋಕಕ್ಕೆ ವಾಲಿದ ನಿವೃತ್ತ ಡಿಜಿಪಿ..!
ಬೈಟಾ ಚೌಕ್ನಲ್ಲಿರುವ ಸಲೂನ್ನ ಮಾಲೀಕನಾಗಿರುವ ಶಂಭು ಕುಮಾರ್ ಠಾಕೂರ್ ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಅಭಿಯಾನಕ್ಕೆ ಉತ್ತೇಜನ ನೀಡುವ ಸಲುವಾಗಿ ತನ್ನ ಸಲೂನ್ನಲ್ಲಿ ಈ ಆಫರ್ ನೀಡಿದ್ದಾರೆ.
ಈ ಕ್ಷೌರದಂಗಡಿಯಲ್ಲಿ ವಿಶೇಷ ಸೇವೆಯನ್ನ ಪಡೆಯಲು ಇಚ್ಚಿಸುವವರು ಕೊರೊನಾ ಲಸಿಕೆ ಪಡೆದ ಪ್ರಮಾಣ ಪತ್ರವನ್ನ ತೋರಿಸೋದು ಕಡ್ಡಾಯವಾಗಿದೆ.
ಈ ಬಣ್ಣದ ಹಾವನ್ನ ಹಿಂದೆಂದೂ ನೀವು ನೋಡಿರೋಕೆ ಸಾಧ್ಯವೇ ಇಲ್ಲ..!
ಜನತೆಗೆ ಲಸಿಕೆಯನ್ನ ನೀಡಲು ಸರ್ಕಾರವು ಇನ್ನಿಲ್ಲದ ಪ್ರಯತ್ನವನ್ನ ಮಾಡುತ್ತಿದೆ. ಇದನ್ನ ಗಮನದಲ್ಲಿರಿಸಿ ಜನರನ್ನ ಲಸಿಕಾ ಕೇಂದ್ರದತ್ತ ಕಳಿಸಲು ಏನಾದರೂ ದಾರಿ ಮಾಡಬೇಕು ಎಂದು ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಶಂಭು ಹೇಳಿದ್ದಾರೆ.
ಈಗಾಗಲೇ 200ಕ್ಕೂ ಅಧಿಕ ಗ್ರಾಹಕರಿಗೆ ಶಂಭು ಉಚಿತವಾಗಿ ಕ್ಷೌರ ಮಾಡಿಸಿದ್ದಾರೆ. ಸಲೂನ್ ಮುಂಭಾಗದಲ್ಲಿ ಈ ಆಫರ್ಗೆ ಸಂಬಂಧಿಸಿದ ಬೋರ್ಡ್ನ್ನೂ ಹಾಕಲಾಗಿದೆ.