ʼಫಾರ್ ರೆಂಟ್’ ಜಾಹೀರಾತೊಂದು ಟೈಪೋ ಎರರ್ನಿಂದ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ಸಾಮಾನ್ಯವಾಗಿ ಮನೆ ಬಾಡಿಗೆಗೆ ಇದೆ ಎಂದು ಜಾಹಿರಾರು ಕೊಡುವವರು ಕೆಲವು ಕಂಡೀಷನ್ ಹಾಕುವುದುಂಟು. ಹೀಗೆ ಒಬ್ಬ ಮನೆ ಮಾಲೀಕ ಕೊಟ್ಟ ಜಾಹೀರಾತಲ್ಲಿ ಷರತ್ತಿನ ವಿಚಾರ ದೋಷಪೂರಿತವಾಗಿ ಮುದ್ರಣವಾಗಿದೆ.
ಸಿಂಗಲ್ ಬೆಡ್ ರೂಂ ಮನೆ ಬಾಡಿಗೆ ನೀಡುವ ಜಾಹೀರಾತು ವೈರಲ್ ಆಗಿದೆ. ಈ ಪೋಸ್ಟ್ ಅನ್ನು ಜುಲೈ 28ರಂದು ಡೋರಿ ಜೀನ್ ಎಂಬುವರು ಬಳಕೆದಾರರರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಅಗ್ನಿವೀರ’ ರಾಗಬಯಸುವ ಈ 6 ಜಿಲ್ಲೆಗಳ ಯುವಕರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ
ಈ ಬಾಡಿಗೆ ಜಾಹೀರಾತಲ್ಲಿ ಧೂಮಪಾನ ನಿಷೇಧದ ಷರತ್ತನ್ನು ಹಾಕಲಾಗಿತ್ತು. ಅದರ ಜೊತೆಗೆ ಕವಿಗಳಿಗೆ ಅವಕಾಶವಿಲ್ಲ ಎಂದು ಪ್ರಕಟಗೊಂಡಿತ್ತು. ಕವಿಗಳಿಗೇಕೆ ಅವಕಾಶವಿಲ್ಲ ಎಂದು ತಲೆ ಕೆರೆದುಕೊಂಡು ನೋಡಿದಾಗ, ಪೆಟ್ (ಸಾಕುಪ್ರಾಣಿ) ಎಂದು ಅಲ್ಲಿ ಬಳಸುವ ಬದಲು ಪೊಯೆಟ್ ಎಂದು ಬರೆಯಲಾಗಿತ್ತು.
ಜಾಹೀರಾತಿನಲ್ಲಿನ ಮುದ್ರಣದೋಷವು ನೆಟ್ಟಿಗರಲ್ಲಿ ನಗು ತರಿಸಿದ್ದು, ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ.
https://twitter.com/ContentAbundant/status/1552482286301487104?ref_src=twsrc%5Etfw%7Ctwcamp%5Etweetembed%7Ctwterm%5E1552482286301487104%7Ctwgr%5E87d8f3a8648ede3a3ef3ffd702fbfecb7c809b10%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-rental-ad-is-going-viral-because-it-has-a-funny-typo-have-you-seen-it-1981522-2022-07-29