ಕ್ರಿಕೆಟಿಗ ರಾಸ್ ಟೇಲರ್ ತಮ್ಮ ಆತ್ಮಚರಿತ್ರೆ ‘ಬ್ಲ್ಯಾಕ್ ಅಂಡ್ ವೈಟ್ʼ ಮೂಲಕ ದೊಡ್ಡ ಸದ್ದು ಮಾಡುತ್ತಿದ್ದು, ಅನೇಕ ಸಂಗತಿ ಬಹಿರಂಗಪಡಿಸಿ ಕ್ರಿಕೆಟ್ ಲೋಕವನ್ನು ದಂಗುಬಡಿಸಿದ್ದಾರೆ.
ಅವರು ಐಪಿಎಲ್ನಲ್ಲಿ ತಮ್ಮ ಮಾಜಿ ಸಹ ಆಟಗಾರ ವಿರಾಟ್ ಕೊಹ್ಲಿ ಬಗ್ಗೆ ಗಮನಾರ್ಹವಾದ ಉಲ್ಲೇಖ ಮಾಡಿದ್ದಾರೆ. ನಾನು 2008 ರಲ್ಲಿ ಆರ್ಸಿಬಿಯಲ್ಲಿ ನಾವು ಐವರು (ಅನಿಲ್, ವಿರಾಟ್, ರಾಹುಲ್, ಜಹೀರ್ ಮತ್ತು ನಾನು) ವಿರಾಮದ ಸಮಯದಲ್ಲಿ ಅನಿಲ್ ಅವರ ಬಿಎಂಡಬ್ಲುನಲ್ಲಿ ಲಾಂಗ್ ರೋಡ್ ಟ್ರಿಪ್ ಹೋಗಿದ್ದೆವು.
ಅದೃಷ್ಟವಶಾತ್ ನಾವು ಯಾವುದೇ ಅಭಿಮಾನಿಗಳಿಂದ ಗಮನಿಸಲಿಲ್ಲ. ತಡರಾತ್ರಿ ಹಿಂತಿರುಗಿ ಬರುವಾಗ ಹಿಂಬದಿಯ ಟೈರ್ಗಳಲ್ಲಿ ಒಂದು ಏಕಾಏಕಿ ಒಡೆದಿದೆ. ಈ ಘಟನೆ ನಡೆದಲ್ಲಿಂದ ಬೆಂಗಳೂರು 200 ಕಿ.ಮೀ. ದೂರದಲ್ಲಿತ್ತು.
ಮರುದಿನ ಆರ್ಸಿಬಿ ಪಂದ್ಯ ಬೇರೆ ಇತ್ತು. ಹತ್ತಿರದ ಪಂಕ್ಚರ್ ಅಂಗಡಿ ಎಲ್ಲಿದೆ ಎಂದು ನಾವು ಸ್ಥಳೀಯರನ್ನು ಕೇಳಿದೆವು. ಅದೃಷ್ಟವಶಾತ್ ಅದು ಕಾಲ್ನಡಿಗೆಯಲ್ಲಿ ಕೇವಲ 10 ನಿಮಿಷಗಳ ದೂರದಲ್ಲಿತ್ತು. ನಾನು ಮತ್ತು ವಿರಾಟ್ ಪಂಕ್ಚರ್ ಅಂಗಡಿಗೆ ಹೋಗಲು ನಿರ್ಧರಿಸಿದೆವು, ಇತರರು ಹಿಂದೆ ಉಳಿದರು. ಅಂಗಡಿಯನ್ನು ತಲುಪಿದ ನಂತರ, ಅಂಗಡಿಯ ಮಾಲೀಕರು ನಾವು ಸಮಯವನ್ನು ಉಳಿಸುವ ಸಲುವಾಗಿ ಹಳೆಯದನ್ನು ದುರಸ್ತಿ ಮಾಡುವ ಬದಲು ಹೊಸ ಟೈರ್ ಖರೀದಿಸಿ ಎಂದು ಶಿಫಾರಸು ಮಾಡಿದರು.
ಆ ಪ್ರಕಾರ ಅವರು ನಮ್ಮನ್ನು ಟೈರ್ ತುಂಬಿದ್ದ ಕೋಣೆಗೆ ಕರೆದೊಯ್ದರು. ಅಲ್ಲಿದ್ದ ವಿವಿಧ ಆಯ್ಕೆಗಳ ಬಗ್ಗೆ ನಾನು ಗಮನಿಸುತ್ತಿದ್ದೆ. ನಾನು ಸ್ಥಳೀಯರಾದ ಕೊಹ್ಲಿಯನ್ನು ಕೇಳಿದೆ, ಯಾವ ಬ್ರಾಂಡ್ ಹೆಚ್ಚು ವಿಶ್ವಾಸಾರ್ಹವಾಗಿದೆ ಎಂದು. ಯಾವುದೇ ಹಿಂಜರಿಕೆಯಿಲ್ಲದೆ ಅವರು ಹೇಳಿದರು, “ದೀರ್ಘ ಬಾಳಿಕೆಗಾಗಿ ನಾನು ಎಂಆರ್ಎಫ್ ಅನ್ನು ಸಂರ್ಪೂಣ ನಂಬುತ್ತೇನೆ. ಮರಳಿ ಸವಾರಿ ನಿಜವಾಗಿಯೂ ಆರಾಮದಾಯಕವಾಗಿತ್ತು. ಟೈರ್ ಅನ್ನು ಇನ್ನೂ ಬದಲಾಯಿಸಲಾಗಿಲ್ಲ ಎಂದು ಕುಂಬ್ಳೆ ಇತ್ತೀಚೆಗೆ ದೃಢಪಡಿಸಿದರು ಎಂದು ರೆಡ್ಹಿಟ್ ಪೋಸ್ಟ್ನಲ್ಲಿ ಅವರ ಆತ್ಮಚರಿತ್ರೆಯ ಅಂಶಗಳನ್ನು ದಾಖಲಿಸಲಾಗಿದೆ.