ಪಾಯಸ ಎಂದಾಕ್ಷಣ ಬಾಯಲ್ಲಿ ನೀರು ಬರುತ್ತದೆ. ಅದರಲ್ಲೂ ಆರೋಗ್ಯಕ್ಕೆ ಒಳ್ಳೆಯದಾದ ಹೆಸರುಬೇಳೆ ಪಾಯಸ ಎಂದರೆ ಕೇಳಬೇಕೆ…? ಇಲ್ಲಿದೆ ನೋಡಿ ರುಚಿಯಾದ ಹೆಸರುಬೇಳೆ ಪಾಯಸ ಮಾಡುವ ವಿಧಾನ.
ಬೇಕಾಗುವ ಸಾಮಗ್ರಿಗಳು : 1 – ಕಪ್ ಹೆಸರುಬೇಳೆ, 2 ಚಮಚ ಗಸ ಗಸೆ, 1 – ಕಪ್ ಬೆಲ್ಲ, 4- 5 – ಏಲಕ್ಕಿ,8 – 9 – ಬಾದಾಮಿ,
ಸ್ವಲ್ಪ ದ್ರಾಕ್ಷಿ , ಗೋಡಂಬಿ, 3 – ಚಮಚ ತುಪ್ಪ 2 – ಕಪ್ ತೆಂಗಿನಕಾಯಿ ಹಾಲು
ಮಾಡುವ ವಿಧಾನ : ಮೊದಲಿಗೆ ಹೆಸರುಬೇಳೆಯನ್ನು ಪರಿಮಳ ಬರುವವರೆಗೂ ಹುರಿದುಕೊಳ್ಳಿ. ನಂತರ ತೊಳೆದು ಕುಕ್ಕರಿಗೆ ಹಾಕಿ 2 ಕಪ್ ನೀರು ಹಾಕಿ ಒಂದು ವಿಷಲ್ ಕೂಗಿಸಿ ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ ಗ್ಯಾಸ್ ಆಫ್ ಮಾಡಿ. ಮಿಕ್ಸಿ ಜಾರಿಗೆ ತೆಂಗಿನತುರಿ, ಹುರಿದ ಗಸಗಸೆ, ಬಾದಾಮಿ, ಏಲಕ್ಕಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.
ನಂತರ ಕುಕ್ಕರ್ ಮುಚ್ಚಳ ತೆಗೆದು ಬೆಂದಿರುವ ಬೇಳೆಯನ್ನು ಸ್ವಲ್ಪ ಮ್ಯಾಶ್ ಮಾಡಿ ಬೆಲ್ಲವನ್ನು ಪುಡಿ ಮಾಡಿ ಹಾಕಿ. ನಂತರ ರುಬ್ಬಿದ ತೆಂಗಿನಕಾಯಿ ಮಿಶ್ರಣ ಹಾಕಿ, ಪಾಯಸದ ಹದಕ್ಕೆ ಬೇಕಾಗುವಷ್ಟು ನೀರು ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ. ಗ್ಯಾಸ್ ಆಫ್ ಮಾಡಿ ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿ ಬಾದಾಮಿ ಚೂರುಗಳನ್ನು ಹಾಕಿದರೆ ರುಚಿಯಾದ ಹೆಸರುಬೇಳೆ ಪಾಯಸ ರೆಡಿ.