alex Certify ಈ ಶಾಲೆಗೆ ಬರುವ ಪುರುಷರೂ ಧರಿಸಬೇಕು ಸ್ಕರ್ಟ್…​..! ಇದರ ಹಿಂದಿದೆ ವಿಶೇಷ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಶಾಲೆಗೆ ಬರುವ ಪುರುಷರೂ ಧರಿಸಬೇಕು ಸ್ಕರ್ಟ್…​..! ಇದರ ಹಿಂದಿದೆ ವಿಶೇಷ ಕಾರಣ

ಲಿಂಗ ಸಮಾನತೆಯನ್ನು ಸಾರುವ ಉದ್ದೇಶದಿಂದ ಸ್ಕಾಟ್​ಲೆಂಡ್​ನ ಪ್ರಾಥಮಿಕ ಶಾಲೆಯೊಂದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ, ಶಿಕ್ಷಕಿಯರಿಗೆ ಸ್ಕರ್ಟ್​ನ್ನೇ ಸಮವಸ್ತ್ರವಾಗಿ ಘೋಷಿಸಿದೆ. ಈಡನ್​ಬರ್ಗ್​ ಕ್ಯಾಸ್ಟಲ್​ವೀವ್​ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ನಿವೇಶನ ಖರೀದಿದಾರರಿಗೆ ಮುಖ್ಯ ಮಾಹಿತಿ: ಸೈಟ್ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚನೆ

ನಮ್ಮ ಶಾಲೆಯು ಲಿಂಗ ಸಮಾನತೆಯನ್ನು ಸಾರುವಂತಾಗಬೇಕು ಎಂದು ಪೋಷಕರಿಗೆ ಕ್ಯಾಸ್ಟಲ್​ ಪ್ರಾಥಮಿಕ ಶಾಲೆಯು ಇಮೇಲ್​ ಕಳುಹಿಸಿದೆ. ಹೀಗಾಗಿ ಬಾಲಕ ಹಾಗೂ ಬಾಲಕಿಯರಿಬ್ಬರಿಗೂ ಸಮವಸ್ತ್ರವಾಗಿ ಸ್ಕರ್ಟ್​ನ್ನು ಧರಿಸಲಿ ಎಂದು ಹೇಳಿದೆ. ಸ್ಕರ್ಟ್​ ಧರಿಸಿದ ಬಳಿಕ ವಿದ್ಯಾರ್ಥಿಗಳಿಗೆ ಯಾವುದೇ ಇರಿಸುಮುರಿಸು ಉಂಟಾಗಬಾರದೆಂದು ಸ್ಕರ್ಟ್​ ಅಡಿಯಲ್ಲಿ ಪ್ಯಾಂಟ್​ ಧರಿಸಲು ಅನುಮತಿ ನೀಡಿದೆ.

ಮಹಿಳೆಯರ ಅಚ್ಚುಮೆಚ್ಚಿನ ಡ್ರೆಸ್ ʼಚೂಡಿದಾರ್ʼ

ಈ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಫೋಟೋಗಳನ್ನು ಶಿಕ್ಷಕಿ ಮಿಸ್​ ವೈಟ್​ ಎಂಬವರು ಟ್ವಿಟರ್​ ಮೂಲಕ ಶೇರ್​ ಮಾಡಿದ್ದಾರೆ. ಈ ಫೋಟೋಗಳಲ್ಲಿ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸ್ಕರ್ಟ್​ ಧರಿಸಿರೋದನ್ನು ಕಾಣಬಹುದಾಗಿದೆ.

ಬಟ್ಟೆಗಳಿಗೆ ಲಿಂಗ ಭೇದವಿಲ್ಲ. ನಿಮಗೆ ಯಾವ ರೀತಿಯ ಉಡುಗೆ ಬೇಕೋ ಅದನ್ನು ಲಿಂಗ ಬೇಧ ಮಾಡದೇ ಆಯ್ಕೆ ಮಾಡಿಕೊಳ್ಳುವಂತಾಗಬೇಕು ಎಂದು ಶಾಲೆಯ ಆಡಳಿತ ಮಂಡಳಿ ಹೇಳಿದೆ.

ಅಂದಹಾಗೆ ಇದು ಕಡ್ಡಾಯ ನಿಯಮವೇನಲ್ಲ. ಈ ಅಭಿಯಾನದಲ್ಲಿ ಭಾಗಿಯಾಗಲು ಇಚ್ಛಿಸದವರು ಇದರಿಂದ ಹೊರಗುಳಿಯಬಹುದಾಗಿದೆ. ನಿಮಗೆ ಇಷ್ಟವಿಲ್ಲದ ಧಿರಿಸನ್ನು ಹಾಕಲು ನಾವು ಎಂದಿಗೂ ಒತ್ತಾಯ ಮಾಡುವುದಿಲ್ಲ. ಆದರೆ ಈ ಮುಖ್ಯ ಸಂದೇಶವನ್ನು ಸಾರುವ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರಲಿ ಎಂದು ಬಯಸುತ್ತೇವೆ. ಸ್ಕರ್ಟ್​ ಕೆಳಗೆ ಪ್ಯಾಂಟ್​ ಕೂಡ ಧರಿಸಬಹುದು ಎಂದು ಶಾಲೆ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...