ಲಿಂಗ ಸಮಾನತೆಯನ್ನು ಸಾರುವ ಉದ್ದೇಶದಿಂದ ಸ್ಕಾಟ್ಲೆಂಡ್ನ ಪ್ರಾಥಮಿಕ ಶಾಲೆಯೊಂದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕ, ಶಿಕ್ಷಕಿಯರಿಗೆ ಸ್ಕರ್ಟ್ನ್ನೇ ಸಮವಸ್ತ್ರವಾಗಿ ಘೋಷಿಸಿದೆ. ಈಡನ್ಬರ್ಗ್ ಕ್ಯಾಸ್ಟಲ್ವೀವ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ನಿವೇಶನ ಖರೀದಿದಾರರಿಗೆ ಮುಖ್ಯ ಮಾಹಿತಿ: ಸೈಟ್ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚನೆ
ನಮ್ಮ ಶಾಲೆಯು ಲಿಂಗ ಸಮಾನತೆಯನ್ನು ಸಾರುವಂತಾಗಬೇಕು ಎಂದು ಪೋಷಕರಿಗೆ ಕ್ಯಾಸ್ಟಲ್ ಪ್ರಾಥಮಿಕ ಶಾಲೆಯು ಇಮೇಲ್ ಕಳುಹಿಸಿದೆ. ಹೀಗಾಗಿ ಬಾಲಕ ಹಾಗೂ ಬಾಲಕಿಯರಿಬ್ಬರಿಗೂ ಸಮವಸ್ತ್ರವಾಗಿ ಸ್ಕರ್ಟ್ನ್ನು ಧರಿಸಲಿ ಎಂದು ಹೇಳಿದೆ. ಸ್ಕರ್ಟ್ ಧರಿಸಿದ ಬಳಿಕ ವಿದ್ಯಾರ್ಥಿಗಳಿಗೆ ಯಾವುದೇ ಇರಿಸುಮುರಿಸು ಉಂಟಾಗಬಾರದೆಂದು ಸ್ಕರ್ಟ್ ಅಡಿಯಲ್ಲಿ ಪ್ಯಾಂಟ್ ಧರಿಸಲು ಅನುಮತಿ ನೀಡಿದೆ.
ಮಹಿಳೆಯರ ಅಚ್ಚುಮೆಚ್ಚಿನ ಡ್ರೆಸ್ ʼಚೂಡಿದಾರ್ʼ
ಈ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಫೋಟೋಗಳನ್ನು ಶಿಕ್ಷಕಿ ಮಿಸ್ ವೈಟ್ ಎಂಬವರು ಟ್ವಿಟರ್ ಮೂಲಕ ಶೇರ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸ್ಕರ್ಟ್ ಧರಿಸಿರೋದನ್ನು ಕಾಣಬಹುದಾಗಿದೆ.
ಬಟ್ಟೆಗಳಿಗೆ ಲಿಂಗ ಭೇದವಿಲ್ಲ. ನಿಮಗೆ ಯಾವ ರೀತಿಯ ಉಡುಗೆ ಬೇಕೋ ಅದನ್ನು ಲಿಂಗ ಬೇಧ ಮಾಡದೇ ಆಯ್ಕೆ ಮಾಡಿಕೊಳ್ಳುವಂತಾಗಬೇಕು ಎಂದು ಶಾಲೆಯ ಆಡಳಿತ ಮಂಡಳಿ ಹೇಳಿದೆ.
ಅಂದಹಾಗೆ ಇದು ಕಡ್ಡಾಯ ನಿಯಮವೇನಲ್ಲ. ಈ ಅಭಿಯಾನದಲ್ಲಿ ಭಾಗಿಯಾಗಲು ಇಚ್ಛಿಸದವರು ಇದರಿಂದ ಹೊರಗುಳಿಯಬಹುದಾಗಿದೆ. ನಿಮಗೆ ಇಷ್ಟವಿಲ್ಲದ ಧಿರಿಸನ್ನು ಹಾಕಲು ನಾವು ಎಂದಿಗೂ ಒತ್ತಾಯ ಮಾಡುವುದಿಲ್ಲ. ಆದರೆ ಈ ಮುಖ್ಯ ಸಂದೇಶವನ್ನು ಸಾರುವ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರಲಿ ಎಂದು ಬಯಸುತ್ತೇವೆ. ಸ್ಕರ್ಟ್ ಕೆಳಗೆ ಪ್ಯಾಂಟ್ ಕೂಡ ಧರಿಸಬಹುದು ಎಂದು ಶಾಲೆ ಹೇಳಿದೆ.