alex Certify ಮೊಣಕಾಲು ನೋವಿಗೆ ಕಾರಣವಾಗುತ್ತೆ ಈ ಅಭ್ಯಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಣಕಾಲು ನೋವಿಗೆ ಕಾರಣವಾಗುತ್ತೆ ಈ ಅಭ್ಯಾಸ

ದಿನನಿತ್ಯದ ಜೀವನದಲ್ಲಿ ಅನೇಕ ಆರೋಗ್ಯ ಸಮಸ್ಯೆ ಎಲ್ಲರನ್ನು ಕಾಡುತ್ತದೆ. ಕಾಲು ನೋವು, ಸೊಂಟ ನೋವು, ಮಧುಮೇಹ ಎಲ್ಲವೂ ಸಾಮಾನ್ಯ ಎನ್ನುವಂತಾಗಿದೆ. ಸಣ್ಣ ಸಣ್ಣ ಮನೆ ಟಿಪ್ಸ್ ಅನೇಕ ರೋಗಗಳನ್ನು ನಿಯಂತ್ರಿಸಲು ಸಹಾಯವಾಗುತ್ತದೆ.

ನೀರು ಎಲ್ಲ ರೋಗಕ್ಕೂ ಮದ್ದು. ಹೆಚ್ಚು ನೀರು ಕುಡಿಯುವ ಮೂಲಕ, ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಬಹುದು. ಆದರೆ ಕೆಲವರು ಫ್ರಿಜ್ ನೀರನ್ನು ಕುಡಿಯುತ್ತಾರೆ. ಇದು ನಿಮಗೆ ಪ್ರಯೋಜನದ ಬದಲು ಹಾನಿ ಮಾಡಬಹುದು. ಹೆಚ್ಚು ತಣ್ಣಗಿನ ನೀರು ಕರುಳನ್ನು ಒಣಗಿಸುತ್ತದೆ. ಹಾಗಾಗಿ ತಣ್ಣೀರಿನ ಬದಲಾಗಿ, ಸ್ವಲ್ಪ ಬೆಚ್ಚಗಿನ ನೀರನ್ನು ಕುಡಿಯಿರಿ.

ಮೊಣಕಾಲು ನೋವು ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆ. ನಮ್ಮ ಶರೀರದ ಹೆಚ್ಚಿನ ಭಾರ ಮೊಣಕಾಲಿನ ಮೇಲೆ ಬೀಳುತ್ತೆ. ಈ ಸಮಸ್ಯೆ ಹೆಚ್ಚು ಭಾರ ಮತ್ತು ಬೊಜ್ಜಿನ ಶರೀರದವರಲ್ಲಿ ಹೆಚ್ಚು. ಮೊಣಕಾಲಿನ ಗಂಟಿಗೆ ಬೀಳುವ ಭಾರ ತೀವ್ರ ನೋವಿಗೆ ಕಾರಣವಾಗುತ್ತದೆ. ಮೊಣಕಾಲಿನ ನೋವಿರುವವರು ನೀರನ್ನು ಯಾವಾಗಲೂ ಕುಳಿತು ಕುಡಿಯಿರಿ. ನಿಂತು ನೀರು ಕುಡಿಯುವುದರಿಂದ ಮೊಣಕಾಲಿನ ಸಮಸ್ಯೆ ಮತ್ತಷ್ಟು ಕಾಡುತ್ತದೆ.

ಕಹಿ ಬೇವಿನ ರುಚಿ ಕಹಿಯಾಗುತ್ತದೆ. ಆದರೆ ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಬೇವಿನ ಎಲೆಗಳನ್ನು ತಿನ್ನುವ ಮೂಲಕ ರಕ್ತವನ್ನು ಸ್ವಚ್ಛಗೊಳಿಸಿಕೊಳ್ಳಿ. ಬೇವಿನ ಎಲೆ ಮಧುಮೇಹವನ್ನು ಸಹ ನಿಯಂತ್ರಣದಲ್ಲಿರಿಸುತ್ತದೆ.

ತುಳಸಿ ಉತ್ತಮ ಔಷಧ ಗುಣಗಳಿಂದ ತುಂಬಿದೆ. ಅದರ ಸುಗಂಧ ಮನೆಯಲ್ಲಿ ಶುದ್ಧತೆಯನ್ನು ಹೆಚ್ಚಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ತುಳಸಿ ತಿಂದ್ರೆ ಮಲೇರಿಯಾ ಕಾಡುವುದಿಲ್ಲ. ಆರೋಗ್ಯ ವೃದ್ಧಿಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...