BSNLನ ಬ್ರಾಡ್ಬ್ಯಾಂಡ್ ಪ್ಲಾನ್ಗಳು ಗ್ರಾಹಕರಿಗೆ ಇಷ್ಟವಾಗುವಂತಿವೆ. ಏಕೆಂದರೆ ಅವುಗಳ ವೆಚ್ಚ ಕಡಿಮೆ ಮತ್ತು ಪ್ರಯೋಜನ ಸಾಕಷ್ಟಿರುತ್ತದೆ. ಅಂಥದ್ದೇ ಹೊಸದೊಂದು ಯೋಜನೆ ಈಗ ಜಿಯೋ, ಏರ್ಟೆಲ್ನಂತಹ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೇ ಗಾಬರಿ ಹುಟ್ಟಿಸಿದೆ.
BSNLನ ಈ ಪ್ಲಾನ್ ಬೆಲೆ 775 ರೂಪಾಯಿ. ಈ ಯೋಜನೆಯಲ್ಲಿ ನಿಮಗೆ BSNL ಭಾರತ್ ಫೈಬರ್ 75 ದಿನಗಳವರೆಗೆ ಇಂಟರ್ನೆಟ್ ಸೇವೆಯನ್ನು ನೀಡುತ್ತದೆ. ಈ ಕೊಡುಗೆಯನ್ನು ಸೀಮಿತ ಅವಧಿಯಲ್ಲಿ ಮಾತ್ರ ಖರೀದಿಸಬಹುದು. ನೀವು ಈ ಯೋಜನೆಯನ್ನು ಸಕ್ರಿಯಗೊಳಿಸಲು ಬಯಸಿದರೆ ನಿಮಗೆ ನವೆಂಬರ್ 15ರವರೆಗೆ ಮಾತ್ರ ಅವಕಾಶವಿದೆ. ಈ ಪ್ಲಾನ್ ನಲ್ಲಿ ಹಲವು ವಿಶೇಷತೆಗಳಿವೆ. ಪ್ರತಿ ತಿಂಗಳು 2 ಜಿಬಿ ಡೇಟಾವನ್ನು ಬಳಕೆದಾರರಿಗೆ ನೀಡಲಾಗುತ್ತಿದೆ.
ಹೈ ಸ್ಪೀಡ್ ಇಂಟರ್ನೆಟ್ ಅನ್ನು ಗ್ರಾಹಕರು ಬಳಸಿಕೊಳ್ಳಬಹುದು. 2 ಟಿಬಿ ಡೇಟಾ ಖಾಲಿಯಾದ ಮೇಲೆ ಮುಂದೇನು ಎಂಬ ಪ್ರಶ್ನೆ ಸಹಜ. ಡೇಟಾ ಮುಗಿದ ನಂತರವೂ ಗ್ರಾಹಕರು ಇಂಟರ್ನೆಟ್ ಅನ್ನು ಬಳಸಲು ಸಾಧ್ಯವಾಗುತ್ತದೆ. ಏಕೆಂದರೆ ಅದು ಅನಿಯಮಿತ. ಆದರೆ ಇಂಟರ್ನೆಟ್ ವೇಗ 10 Mbps ಗೆ ಕಡಿಮೆಯಾಗುತ್ತದೆ. ಇಷ್ಟೇ ಅಲ್ಲ, ಈ ಪ್ಲಾನ್ ಅನ್ನು ರೀಚಾರ್ಜ್ ಮಾಡಿಕೊಂಡಲ್ಲಿ SonyLIV, G5 ಮತ್ತು Voot ನಂತಹ ಅನೇಕ ಪ್ಲಾಟ್ಫಾರ್ಮ್ಗಳನ್ನು ಒಳಗೊಂಡಂತೆ ಉಚಿತವಾಗಿ ನೀವು OTT ಚಂದಾದಾರಿಕೆಗಳನ್ನು ಪಡೆಯಬಹುದು. ಇದಕ್ಕಾಗಿ ಗ್ರಾಹಕರು ಪ್ರತ್ಯೇಕವಾಗಿ ಹಣ ಪಾವತಿಸಬೇಕಾಗಿಲ್ಲ.