ಪ್ರೀತಿಗೆ ಭಾಷೆಯ ಹಂಗಿಲ್ಲ ಅಂತಾರೆ. ಭಾವನೆಗಳು ಬೆರೆತರೆ ಭಾಷೆಯ ಅವಶ್ಯಕತೆಯೇ ಪ್ರೀತಿಗೆ ಬೀಳೋದಿಲ್ಲ. ಇಷ್ಟಕ್ಕೂ ಈ ಮಾತುಗಳನ್ನ ಹೇಳೋಕೆ ಪ್ರಮುಖ ಕಾರಣ ಒಂದಿದೆ.
ಮುದ್ದಾದ ಪಕ್ಷಿಯೊಂದು ತನ್ನದೇ ಭಾಷೆಯಲ್ಲಿ ಪ್ರೀತಿಯನ್ನ ವ್ಯಕ್ತಪಡಿಸಿದ್ದು ಈ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಗಲ್ಲಾಪೆಟ್ಟಿಗೆ ಸದ್ದು ಮಾಡ್ತಿದೆ. ಪೆಸಿಫಿಕ್ ಗಿಳಿ ಜಾತಿಗೆ ಸೇರಿದ ಈ 2 ವರ್ಷದ ಹಕ್ಕಿಯ ಹೆಸರು ಆರ್ಲೋ. ಈ ರೀತಿ ಮಾಡಿದ್ರೆ ಅದು ಐ ಲವ್ ಯೂ ಎಂದು ಹೇಳ್ತಿದೆ ಎಂಬರ್ಥವಂತೆ..!
ನಿರೀಕ್ಷೆಯಂತೆ ಈ ಮುದ್ದಾದ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಕೇವಲ 12 ಗಂಟೆಯ ಅವಧಿಯಲ್ಲಿ 5 ಮಿಲಿಯನ್ಗೂ ಅಧಿಕ ವೀವ್ಸ್ ಸಂಪಾದಿಸುವಲ್ಲಿ ಈ ವಿಡಿಯೋ ಯಶಸ್ವಿಯಾಗಿದೆ. ಕಮೆಂಟ್ ವಿಭಾಗದಲ್ಲಿ ಹೆಚ್ಚಿನ ಜನರು ಆರ್ಲೋದ ಮುದ್ದಾದ ಮುಖ ಹಾಗೂ ರೆಕ್ಕೆಗೆ ಫಿದಾ ಆಗಿದ್ದೇವೆ ಎಂದು ಹೇಳಿದ್ದಾರೆ.
https://www.instagram.com/p/CP_pGeyjgD1/?utm_source=ig_web_copy_link