ಭಾರತದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಗ್ರಾಹಕರ ಜೇಬು ಕತ್ತರಿಸಿದೆ. ಪ್ರಮುಖ ನಗರಗಳಲ್ಲಿ ಟೊಮೆಟೊ ಬೆಲೆ ಕೆಜಿಗೆ 155 ರೂ. ಗಳಷ್ಟಿದೆ. ಇದೀಗ ಟೊಮೆಟೊ ಬೆಲೆ ಏರಿಕೆಯು ಟ್ವಿಟರ್‌ನಲ್ಲಿ ಭಾರಿ ಮೇಮ್ ಯನ್ನೇ ಹುಟ್ಟುಹಾಕಿದೆ. ಬೆಲೆ ಏರಿಕೆಯ ಕುರಿತು ಕಂಟೆಂಟ್ ಕ್ರಿಯೇಟರ್ ಕುಶಾಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಕುಶಾಲ್ ಎಂಬಾತ ಮತ್ತು ಆತನ ಸ್ನೇಹಿತರ ಗುಂಪು ಹಾಡೊಂದಕ್ಕೆ ನೃತ್ಯ ಮಾಡುವುದನ್ನು ತೋರಿಸುತ್ತದೆ. ಜನಪ್ರಿಯ ತಮಿಳು ಹಾಡು ತುಮ್ ತುಮ್‌ನ ಮ್ಯೂಸಿಕ್ ಗೆ, ಟೊಮೆಟೊ ಎಷ್ಟು ಬೆಲೆ ಬಾಳುತ್ತದೆ ಎಂಬ ಸಾಹಿತ್ಯದ ಮೂಲಕ ಅಣಕು ಹಾಡು ರಚಿಸಲಾಗಿದೆ. ಸಾಂಬಾರ್‌ನಿಂದ ಪಾವ್ ಭಾಜಿಯವರೆಗೆ, ಪ್ರತಿಯೊಂದು ಭಾರತೀಯ ಖಾದ್ಯಕ್ಕೂ ಟೊಮೆಟೊ ಅಗತ್ಯವಿದೆ. ಹೀಗಾಗಿ ಸಾಮಾನ್ಯ ಜನರಿಗೆ ಉತ್ತಮ ಊಟವನ್ನು ಆನಂದಿಸುವುದು ತುಂಬಾ ಕಷ್ಟಕರವಾಗಿದೆ ಎಂದು ಹಾಡುತ್ತಾ ಸ್ನೇಹಿತರ ಗುಂಪು ನೃತ್ಯ ಮಾಡಿದೆ.
ಸದ್ಯ, ಈ ವಿಡಿಯೋ ಹಲವಾರು ಲೈಕ್‌ಗಳು ಮತ್ತು ಟನ್ ಗಳಷ್ಟು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಜನರು ಈ ಹಾಡನ್ನು ಕೇಳಿ ನಕ್ಕಿದ್ದಾರೆ. ಕುಶಾಲ್ ತಮ್ಮ ಅಣಕು ಗೀತೆಯಲ್ಲಿ ಮಧ್ಯಮ ವರ್ಗದ ಸ್ಥಿತಿಯನ್ನು ಎಷ್ಟು ಸೂಕ್ತವಾಗಿ ವಿವರಿಸಿದ್ದಾರೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ವಿಶಿಷ್ಟ ಪರಿಕಲ್ಪನೆಯೊಂದಿಗೆ ಹಾಡು ರಚಿಸಿದ್ದಕ್ಕೆ ಹಲವರು ರಚನೆಕಾರರನ್ನು ಶ್ಲಾಘಿಸಿದ್ರು.