ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಹಾಗೂ 2 ಲಕ್ಷ ಜನಸಂಖ್ಯೆಯನ್ನ ಹೊಂದಿರುವ ಜಾಕೋಬಾಬಾದ್ ಎಂಬ ಹೆಸರಿನ ನಗರವು ತನ್ನ ಅತಿಯಾದ ಉಷ್ಣಾಂಶದ ಕಾರಣದಿಂದ ವಿಶ್ವ ಮಟ್ಟದಲ್ಲಿ ಸುದ್ದಿ ಮಾಡಿದೆ. ಬೇಸಿಗೆ ಕಾಲದಲ್ಲಿ ಸೂರ್ಯನು ಅತೀ ಹತ್ತಿರ ಬಂದಿದ್ದರಿಂದ ಈ ಪ್ರದೇಶದಲ್ಲಿ ಬರೋಬ್ಬರಿ 52 ಡಿಗ್ರಿ ಸೆಲ್ಸಿಯಸ್ನಷ್ಟು ತಾಪಮಾನ ದಾಖಲಾಗಿದೆ.
ಈ ವಿಚಾರವಾಗಿ ಮಾತನಾಡಿದ ಅಂಗಡಿಯೊಂದರ ಮಾಲೀಕ ಅಬ್ದುಲ್ ಬಖಿ, ಇಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ದಾಟುತ್ತಿದ್ದಂತೆಯೇ ಜನರು ಮನೆಯಿಂದ ಹೊರಗೆ ಬರೋದೇ ಇಲ್ಲ. ಹೀಗಾಗಿ ಇಲ್ಲಿನ ಬೀದಿಗಳೆಲ್ಲ ನಿರ್ಜನವಾಗಿರುತ್ತದೆ. ಇಲ್ಲಿನ ಉಷ್ಣಾಂಶ ಯಾವ ಪ್ರಮಾಣದಲ್ಲಿ ಇರುತ್ತೆ ಅಂದರೆ ನಿಮ್ಮ ಪಾದಗಳನ್ನ ನೆಲಕ್ಕೆ ಊರಲು ಸಾಧ್ಯವಾಗೋದಿಲ್ಲ ಎಂದು ಹೇಳಿದ್ರು.
ಅಲ್ಲದೇ ಈ ಸಂದರ್ಭದಲ್ಲಿ ನಗರದ ಬಹುತೇಕ ಆಸ್ಪತ್ರೆಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತದೆ. ಜೀವನೋಪಾಯಕ್ಕಾಗಿ ಮನೆಯಿಂದ ಹೊರಗೆ ಬರಲೇಬೇಕಾದ ಅನಿವಾರ್ಯತೆ ಹೊಂದಿದವರು ಶಾಖ ಉಗುಳುವ ಸೂರ್ಯನ ರುದ್ರ ನರ್ತನಕ್ಕೆ ಬಲಿಯಾಗ್ತಾರೆ.
ಈ ಭಾಗದಲ್ಲಿ ವಾಸಿಸುವ ಬಹುತೇಕ ಕುಟುಂಬಗಳು ಬಡತನ ರೇಖೆಯಲ್ಲಿ ಬರುತ್ತದೆ. ಹೀಗಾಗಿ ಅವರಿಗೆ ಬೇರೆ ಕಡೆ ಹೋಗಲು ಸಾಧ್ಯವಾಗೋದಿಲ್ಲ. ನಾನು ಸಹ ಈ ಊರಿನಿಂದ ವಲಸೆ ಹೋಗೋಣ ಎಂದುಕೊಂಡೆ, ಆದರೆ ಎಲ್ಲಿ ಹೋಗಲಿ ಎಂದು ತಿಳಿಯಲಿಲ್ಲ ಎಂದು ವ್ಯಾಪಾರಿಯೊಬ್ಬರು ತಮ್ಮ ಕಷ್ಟ ತೋಡಿಕೊಂಡರು.