alex Certify ಆಮೆ ಗೋಡೆ ಏರುವುದನ್ನು ಎಂದಾದರೂ ನೋಡಿರುವಿರಾ ? ಅಚ್ಚರಿಗೊಳಿಸುವ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಮೆ ಗೋಡೆ ಏರುವುದನ್ನು ಎಂದಾದರೂ ನೋಡಿರುವಿರಾ ? ಅಚ್ಚರಿಗೊಳಿಸುವ ವಿಡಿಯೋ ವೈರಲ್​

ನೀವು ಆಕ್ಷನ್ ಹಾಸ್ಯ ಚಲನಚಿತ್ರ ನಿಂಜಾ ಟರ್ಟಲ್ಸ್ ಅನ್ನು ವೀಕ್ಷಿಸಿದ್ದರೆ, ಈ ವೈರಲ್​ ವಿಡಿಯೋ ನಿಮಗಾಗಿ. ನಿಂಜಾ ಟರ್ಟಲ್ಸ್​ ಚಿತ್ರದಲ್ಲಿ ಮೂರು ತಳೀಯವಾಗಿ ರೂಪಾಂತರಗೊಂಡ ಆಮೆಗಳ ಕುರಿತು ತಿಳಿಸಲಾಗಿದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ.

ಇನ್‌ಸ್ಟಾಗ್ರಾಮ್​ನಲ್ಲಿ ಶೇರ್​ ಆಗಿರುವ ವಿಡಿಯೋ ಒಂದರಲ್ಲಿ ಆಮೆಯ ಕುತೂಹಲವೊಂದನ್ನು ಚಿತ್ರಿಸಲಾಗಿದೆ. ನೀರಿನಲ್ಲಿ ಹಾಗೂ ಭೂಮಿಯ ಮೇಲೆ ಆಮೆ ಹರಿದಾಡುವುದನ್ನು ನೋಡಿರಬಹುದು. ಆದರೆ ಈ ವೈರಲ್​ ವಿಡಿಯೋದಲ್ಲಿ ಆಮೆ ಗೋಡೆ ಹತ್ತುತ್ತಿರುವ ಅಚ್ಚರಿಯ ವಿಷಯ ಬೆಳಕಿಗೆ ಬಂದಿದ್ದು, ಬಳಕೆದಾರರನ್ನು ದಿಗ್ಭ್ರಮೆಗೊಳಿಸಿದೆ. ಇದಕ್ಕೆ “ನಿಂಜಾ ಆಮೆ” ಎಂದು ಶೀರ್ಷಿಕೆ ಕೊಡಲಾಗಿದೆ.

ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಆಮೆ ಮರಿ ಗೋಡೆಗೆ ಅಂಟಿಕೊಂಡು ನಾಲ್ಕು ಸಣ್ಣ ಕಾಲುಗಳಿಂದ ಮೇಲಕ್ಕೆ ಏರುತ್ತಿರುವುದನ್ನು ನಾವು ನೋಡಬಹುದು. ಆಮೆಯು ಕೆಲವು ಅಲೌಕಿಕ ಶಕ್ತಿಯನ್ನು ಹೊಂದಿರುವಂತೆ ತೋರುತ್ತದೆ. ಏಕೆಂದರೆ ಅದು ವಿಚಿತ್ರವಾಗಿ ಸರಸರನೆ ಏರಿದೆ. ಆಮೆಯು ತನ್ನ ಕಾಲುಗಳಿಗೆ ಕೆಲವು ಮ್ಯಾಗ್ನೆಟ್ ಅನ್ನು ಜೋಡಿಸಿದಂತೆ ಕಾಣುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...