alex Certify ಡಿಜಿ ಲಾಕರ್‌ ನಲ್ಲಿ ಸುರಕ್ಷಿತವಾಗಿರಲಿದೆ ವಾಹನಕ್ಕೆ ಸಂಬಂಧಿಸಿದ ದಾಖಲಾತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಜಿ ಲಾಕರ್‌ ನಲ್ಲಿ ಸುರಕ್ಷಿತವಾಗಿರಲಿದೆ ವಾಹನಕ್ಕೆ ಸಂಬಂಧಿಸಿದ ದಾಖಲಾತಿ

ನಿಮ್ಮಲ್ಲಿ ಎಷ್ಟು ಜನ ಮನೆಯಲ್ಲಿಯೇ ಡ್ರೈವಿಂಗ್ ಲೈಸೆನ್ಸ್ , ಆರ್ ಸಿ ಪುಸ್ತಕ ಅಥವಾ ಇನ್ಯಾವುದಾದರೂ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಟ್ಟು ಬಂದು, ದಾರಿ ಮಧ್ಯೆ ಸಂಚಾರಿ ಪೊಲೀಸ್ ಅವರಿಂದ ಸಿಕ್ಕಿಹಾಕಿಕೊಂಡು ಕಷ್ಟಪಟ್ಟಿರುತ್ತೀರಿ.

ಎಷ್ಟೇ ನೆನಪಿಸಿಕೊಂಡರೂ, ಜೋಪಾನ ಮಾಡಿದರೂ ದಾಖಲೆ ಮನೆ ಅಥವಾ ಇನ್ನೊಂದು ಗಾಡಿಯೊಳಗೆ ಬಿಟ್ಟು ಬಂದಿರಬಹುದು. ಅಥವಾ ಒಮ್ಮೊಮ್ಮೆ ಕಳೆದುಕೊಂಡು ಇರಬಹುದು. ಇಂತಹವರಿಗೆ ಇಲ್ಲಿದೆ ನೋಡಿ ಸಿಹಿ ಸುದ್ದಿ.

ಡಿಎಲ್ ಅಥವಾ ಆರ್ ಸಿ ಪುಸ್ತಕವನ್ನು ವಾಹನ ಚಾಲನೆ ಮಾಡುವವರು ಡಿಜಿಟಲ್ ಸ್ವರೂಪದಲ್ಲಿ ಎಲ್ಲೆಂದರಲ್ಲಿ ತೆಗೆದುಕೊಂಡು ಹೋಗಬಹುದು. ಇದಕ್ಕೆಂದೇ ಡಿಜಿಲಾಕರ್ ಸ್ವರೂಪದ mParivahan ಎಂಬ ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದು, ಎಲ್ಲಾ ದಾಖಲೆಗಳನ್ನು ತಮ್ಮ ಮೊಬೈಲ್ ಫೋನಿನಲ್ಲಿ ಸುರಕ್ಷಿತವಾಗಿ ಇಡಬಹುದು. ಕಾಗದ ಅಥವಾ ಕಾರ್ಡ್ ರೂಪದ ದಾಖಲೆಗಳನ್ನು ಮರೆತರೂ, ನಿಮ್ಮ ಮೊಬೈಲ್ ನಲ್ಲಿ ಕಾಣುವ e-ದಾಖಲೆಗಳನ್ನು ಪೊಲೀಸ್ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ತೋರಿಸಬಹುದು.

ದೆಹೆಲಿಯ ಸಾರಿಗೆ ಇಲಾಖೆಯು ಡಿಜಿಟಲ್ ಸ್ವರೂಪದಲ್ಲಿ ದಾಖಲೆಗಳನ್ನು ತೆಗೆದುಕೊಂಡು ಹೋಗಬಹುದು ಎಂದು ತಿಳಿಸಿದೆ. ಇದು ಮೋಟಾರು ಕಾಯ್ದೆ 1988 ಅಡಿಯಲ್ಲಿ ಮಾನ್ಯತೆ ಕೂಡ ಪಡೆದಿದೆ. ಹಾಗಂತ, ಈ ದಾಖಲೆಗಳನ್ನು ಬೇರೆ ಯಾವ ಡಿಜಿಟಲ್ ಸ್ವರೂಪದಲ್ಲಿ ತೋರಿಸಿದಲ್ಲಿ, ಅದನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸಾರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ.

ಏನಿದು ಡಿಜಿಲಾಕರ್/mParivahan ?

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ಡಿಜಿಲಾಕರ್ (mParivahan ) ಅಭಿವೃದ್ಧಿಪಡಿಸಿದ್ದು, ಇದರಲ್ಲಿ ವಾಹನ ಚಾಲನೆ ಮಾಡುವವರು ತಮಗೆ ಬೇಕಾದ ದಾಖಲೆಗಳನ್ನು ಇದರೊಳಗೆ ಡಿಜಿಟಲ್ ರೂಪದಲ್ಲಿ ಸಂರಕ್ಷಿಸಬಹುದು. ಇದು ನಿಮ್ಮ ಆಧಾರ್ ಕಾರ್ಡ್ ಮತ್ತು ಫೋನ್ ನಂಬರ್ ಗೆ ಜೋಡಿಸಲಾಗಿರುತ್ತದೆ.

ಚಾಲಕರ ಪಾಲಿಗೆ ಸವಾಲೊಡ್ಡುವ ವಿಶ್ವ ನಗರಗಳ ಪಟ್ಟಿಯಲ್ಲಿ ಮುಂಬೈಗೆ ಪ್ರಥಮ ಸ್ಥಾನ

ಇದನ್ನು ಬಳಸುವ ವಿಧಾನ ಹೆಂಗೆ ಎಂದು ತಿಳಿದುಕೊಳ್ಳೋಣ

* ಡಿಜಿಲಾಕರ್ ವೆಬ್ ಸೈಟ್ ಗೆ ಹೋಗಿ, ಡಿಜಿಲಾಕರ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.

* ನಂತರ ನಿಮ್ಮ ಆಧಾರ್ ಸಂಖ್ಯೆ ಅಥವಾ ಫೋನ್ ನಂಬರ್ ಸಹಾಯದಿಂದ ನಿಮ್ಮದೇ ಒಂದು ಐ ಡಿ ಪಡೆದುಕೊಳ್ಳಿ.

* ಇದಾದ ನಂತರ ಒಟಿಪಿ ಬರುತ್ತದೆ, ಇದರ ಸಹಾಯದಿಂದ ನಿಮಗೆ ಬೇಕಾಗಿರುವ ದಾಖಲೆಗಳನ್ನು ಅದರಲ್ಲಿ ಕೊಟ್ಟಿರುವ ಸೂಚನೆಯಂತೆ ದಾಖಲಿಸಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...