ಪಕ್ಕಾ ಪರಿಸರವಾದಿಗಳಾದ ದಂಪತಿಗಳಿಬ್ಬರು ’ಸಾಧ್ಯವಾದಷ್ಟು ಸಹಜತೆ’ಯ ಬದುಕು ನಡೆಸುತ್ತಿರುವ ನಿದರ್ಶನ ಇದು.
ಪರಿಸರ ನಮ್ಮನ್ನು ಹೇಗೆ ಇಟ್ಟಿದೆಯೂ ಸಾಧ್ಯವಾದಷ್ಟೂ ಅದೇ ರೂಪದಲ್ಲಿ ಬದುಕಬೇಕೆಂಬ ಸಿದ್ಧಾಂತದಲ್ಲಿ ಜೀವನ ನಡೆಸುತ್ತಿರುವ ಇಂಗ್ಲೆಂಡ್‌ನ ವಿಲ್ಟ್‌ಶೈರ್‌ನ ಚಿಪ್ಪೆನ್‌ಹ್ಯಾಂನ ಜಾನ್ ಹಾಗೂ ಹೆಲೆನ್ ಮೈಮೇಲೆ ಏನನ್ನೂ ಧರಿಸದೇ ಬದುಕುತ್ತಿದ್ದಾರೆ.
2011ರಲ್ಲಿ ಮೊದಲ ಬಾರಿಗೆ ಇಬ್ಬರೂ ಭೇಟಿಯಾಗಿದ್ದಾರೆ. ಹೆಲೆನ್ 2006ರಿಂದ ’ಪರಿಸರವಾದಿ’ಯಾಗಿದ್ದು, ಬೆತ್ತಲಾಗಿ ಎಲ್ಲೆಡೆ ಓಡಾಡುವ ಜೀವನಶೈಲಿಗೆ ಅಡ್ಜಸ್ಟ್ ಆಗಿಬಿಟ್ಟಿದ್ದರು. ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಾಮೂಹಿಕ ಸ್ನಾನದಂಥ ಕಾನ್ಸೆಪ್ಟ್‌ಗಳಿಗೆ ಜಾನ್ ಒಗ್ಗಿದ್ದರು.
ಗ್ರಾಮೀಣ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಮತ್ತೊಂದು ಸಿಹಿ ಸುದ್ದಿ: ಈ ವರ್ಷವೇ ಕನ್ನಡದಲ್ಲಿ ಇಂಜಿನಿಯರಿಂಗ್ ಕೋರ್ಸ್
ತಮ್ಮದೇ ಆದ ಥೀಮ್‌ನಲ್ಲಿ ಇಲ್ಲಿನ ಲಾಂಗ್‌ಹೋಪ್‌ನ ಪೈನ್ಸ್ ಔಟ್‌ಡೋರ್ ಕ್ಲಬ್‌ನಲ್ಲಿ ಮದುವೆಯಾದ ಇಬ್ಬರೂ, ಆಗಿನಿಂದ ನೀರು/ವಿದ್ಯುತ್ ಸಂಪರ್ಕದ ಚಿಂತೆಯೇ ಇಲ್ಲದೇ ಜೀವಿಸುತ್ತಿದ್ದಾರೆ.
ಸ್ವಾಭಾವಿಕ ತೋಟಗಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿರುವ ಈ ದಂಪತಿ, ಕಾಡಿನ ಸಸ್ಯವರ್ಗಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಹಳೆಯದೊಂದು ವ್ಯಾನ್‌ನಲ್ಲಿ ಮಲಗುವ ಇವರು, ಆ ಜಾಗದಲ್ಲೂ ಸಹ ಆರ್ಕಿಡ್‌ನ ಕೆಲ ತಳಿಗಳನ್ನು ಸಂರಕ್ಷಣೆ ಮಾಡುತ್ತಿದ್ದಾರೆ.