‘ಚೆಲ್ಸಿ’ ಎಂಬ ಟಿಕ್‌ಟಾಕ್ ಬಳಕೆದಾರಳಿಗೆ ಸಾವಿರಾರು ಮಂದಿ ಅಭಿಮಾನಿಗಳು ಇದ್ದಾರೆ. ಆಕೆಯ ವಿಶಿಷ್ಟ ವಿಡಿಯೊಗಳು, ಅದರಲ್ಲೂ ಮಕ್ಕಳನ್ನು ಬೆಳೆಸುವ ಬಗ್ಗೆ ಆಕೆ ನೀಡುವ ಹೊಸ ಮಾದರಿಯ ಸೂತ್ರಗಳಿಂದ ಟಿಕ್‌ಟಾಕ್ ಬಳಕೆದಾರರು ಬಹಳಷ್ಟು ಪ್ರಭಾವಿತರಾಗಿದ್ದಾರೆ. ಆದರೆ, ಚೆಲ್ಸಿ ಇತ್ತೀಚೆಗೆ, ಬ್ಯಾಡ್ ವರ್ಡ್ಸ್ ಅಥವಾ ಬೈಗುಳದ ಬಗ್ಗೆ ಮಾಡಿದ ವಿಡಿಯೋಗೆ ಆಕ್ಷೇಪಗಳು ಹೆಚ್ಚಾಗಿ ಬಂದಿವೆ. ಬಹಳಷ್ಟು ಅಭಿಮಾನಿಗಳೇ ಚೆಲ್ಸಿಯ ಹೊಸ ನಡೆಯನ್ನು ಖಂಡಿಸಿದ್ದಾರೆ ಕೂಡ.
‘ಇಂಥಾ ದೊಡ್ಡ ಹಡಗಿನಲ್ಲಿ ಆರ್ಯನ್ ಮಾತ್ರ ತಿರುಗಾಡುತ್ತಿದ್ದನಾ..? NCB ಗೆ ಗಾಯಕ ಮಿಕಾ ಸಿಂಗ್ ಪ್ರಶ್ನೆ
ಆಕೆ ಹೇಳಿದ್ದು ಇಷ್ಟು, ’ ನಾನು ನನ್ನ ಮೂರು ವರ್ಷದ ಮಗನಿಗೆ ಹೆಣ್ಣುಮಕ್ಕಳಿಗೆ ಮಾತ್ರವೇ ಸೀಮಿತ ಎನ್ನಲಾಗುವ ಗೊಂಬೆಗಳು ಮತ್ತು ಅದರ ಸಿಂಗಾರ ಮಾಡುವ ಆಟಕ್ಕೆ ಅವಕಾಶ ಮಾಡಿಕೊಡುತ್ತೇನೆ. ನನಗೆ ಲಿಂಗಭೇದವಿಲ್ಲದೆಯೇ ಮಗನು ಎಲ್ಲ ಆಟಗಳನ್ನು ಆಡಲಿ ಎನ್ನುವ ಆಸೆಯಿದೆ. ಆತನ ವಯಸ್ಸಿಗೆ ಅನುಗುಣವಾಗಿ ಸಮಾಜದಲ್ಲಿ ಬಳಕೆಯಲ್ಲಿರುವ ಎಲ್ಲ ಪದಗಳು (ಬೈಗುಳಗಳು ಸೇರಿದಂತೆ) ಆತನಿಗೆ ಪರಿಚಿತವಾಗಲಿ ಎಂಬ ಉದ್ದೇಶದಿಂದ ಆತನಿಗೆ ಬೈಗುಳಕ್ಕೂ ಅವಕಾಶ ಕೊಡುತ್ತೇನೆ.
ಬಳಿಕ ಆತನಿಗೆ ಬೈಗುಳದ ಅರ್ಥ, ಅದರಿಂದಾಗುವ ಅವಘಡಗಳ ಅರಿವು ಮೂಡಿಸುತ್ತೇನೆ. ಮತ್ತೊಮ್ಮೆ ಅಂಥ ಪದಬಳಕೆ ಮಾಡದಂತೆ ಪ್ರಮಾಣ ಕೂಡ ಮಾಡಿಸಿಕೊಳ್ಳುತ್ತೇನೆ. ಯಾವುದರಿಂದಲೂ ಆತನನ್ನು ಅಪರಿಚಿತನಾಗಿ ಇರಿಸಿ, ಕೆಟ್ಟ ಕುತೂಹಲವನ್ನು ಅವನಲ್ಲಿ ಉದ್ಭವಿಸಲು ಬಿಡಲ್ಲ ಎಂದು ಚೆಲ್ಸಿ ಹೊಸ ವಿಡಿಯೊವೊಂದರಲ್ಲಿ ತಮ್ಮ ನಡೆಯನ್ನು ವಿವರಿಸಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಬರೋಬ್ಬರಿ 31 ವರ್ಷಗಳಿಂದ ಕೇವಲ ಚಹಾ ಸೇವಿಸಿ ಬದುಕಿದ್ದಾಳೆ ಈ ಮಹಿಳೆ..!
ಇದಾದ ಬಳಿಕ ಆಕ್ಷೇಪಿಸಿದ್ದ ಹಲವರು ತಮ್ಮ ಮಕ್ಕಳಿಗೂ ವಯಸ್ಸಿಗೆ ಅನುಗುಣವಾಗಿ ಚಾಲ್ತಿಯಲ್ಲಿರುವ ಬೈಗುಳ ಹೇಳಲು ಅವಕಾಶ ಮಾಡಿಕೊಡಲು ಒಪ್ಪಿಗೆಯನ್ನು ಕಮೆಂಟ್ಸ್‌ಗಳಲ್ಲಿ ಸೂಚಿಸಿದ್ದಾರೆ. ಆದರೆ ಪ್ರಮಾಣ ಮಾಡಿಸಿಕೊಳ್ಳುವುದಕ್ಕೆ ಮಾತ್ರ ಅವರು ಒಪ್ಪಿಲ್ಲ.