alex Certify ಪತ್ನಿ ಫೋಟೋ ಮುದ್ರಿತವಾಗಿರುವ ದಿಂಬನ್ನು ಹೋದಲೆಲ್ಲಾ ತೆಗೆದುಕೊಂಡು ಹೋಗಿದ್ದ ಈ ಪತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ಫೋಟೋ ಮುದ್ರಿತವಾಗಿರುವ ದಿಂಬನ್ನು ಹೋದಲೆಲ್ಲಾ ತೆಗೆದುಕೊಂಡು ಹೋಗಿದ್ದ ಈ ಪತಿ….!

ಇಂಟರ್ನೆಟ್ ಹಲವಾರು ವಿಲಕ್ಷಣ ವಿಡಿಯೋಗಳ ಕಣಜವಾಗಿದೆ. ಇತ್ತೀಚೆಗೆ ಮುಂಬೈ ಮೂಲದ ವ್ಯಕ್ತಿಯೊಬ್ಬ ಆಫೀಸ್ ಕೆಲಸ ಎಂದು ತನ್ನ ಗೆಳತಿ ಜೊತೆ ಮಾಲ್ಡೀವ್ಸ್ ಗೆ ಹಾರಿ ಕೊನೆಗೆ ಹೇಗೆ ಪತ್ನಿಯ ಕೈಗೆ ಸಿಕ್ಕಿಬಿದ್ದ ಎಂಬ ಬಗೆಗಿನ ಸ್ಟೋರಿಯನ್ನು ಬಹುಶಃ ನೀವು ಓದಿರಬಹುದು. ಇದೀಗ ಇಲ್ಲೊಬ್ಬ ಪುಣ್ಯಾತ್ಮ ತನ್ನೊಂದಿಗೆ ತನ್ನ ಪತ್ನಿಗೆ ಬರಲು ಸಾಧ್ಯವಾಗಿಲ್ಲ ಅಂತಾ ಆಕೆಯ ಮುಖವನ್ನು ಮುದ್ರಿಸಲಾಗಿರುವ ದಿಂಬಿನೊಂದಿಗೆ ರಜಾ ಸಮಯ ಕಳೆದಿದ್ದಾನೆ.

ಹೌದು, ವ್ಯಕ್ತಿಯೊಬ್ಬ ಫಿಲಿಪೈನ್ಸ್‌ನಲ್ಲಿ ಕಳೆದ ತನ್ನ ರಜೆಯ ಚಿತ್ರಗಳನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದು ಆನ್‌ಲೈನ್‌ನಲ್ಲಿ ಕ್ರೇಜಿ ವೈರಲ್ ಆಗಿವೆ. ಈತನ ಹೆಸರು ರೇಮಂಡ್ ಟ್ಯಾನ್ ಫಾರ್ಟುನಾಡೋ ಎಂದು. ಈತ ತನ್ನ ಹೆಂಡತಿ ಜೊವಾನ್ನಾಳಿಗೆ ಬರಲು ಸಾಧ್ಯವಾಗಿಲ್ಲ ಅಂತಾ ಆಕೆ ಮುಖವನ್ನು ಮುದ್ರಿಸಿದ ದಿಂಬಿನೊಂದಿಗೆ ವಿಹಾರಕ್ಕೆ ಹೋಗಿದ್ದಾನೆ.

ಅಂದಹಾಗೆ, ದಂಪತಿಗಳು ಜೊತೆಯಲ್ಲೇ ವಿಹಾರಕ್ಕೆ ಹೋಗಲು ಯೋಜಿಸಿದ್ದರಂತೆ. ಆದರೆ, ಕಾರಣಾಂತರಗಳಿಂದ ಜೊವಾನ್ನಾಳಿಗೆ ಟ್ರಿಪ್ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಬೇಸರಗೊಂಡ ಪತಿರಾಯ ತಾನೊಬ್ಬನೇ ಹೊರಡುವುದು ಹೇಗೆ ಅಂತಾ ಆಲೋಚಿಸುತ್ತಾ ಈ ಪ್ಲಾನ್ ಮಾಡಿದ್ದಾನೆ. ಇದರ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ರೇಮಂಡ್ ಜೊವಾನ್ನಾಳ ಮುಖದ ದಿಂಬನ್ನು ಕೈಗೆತ್ತಿಕೊಂಡಿದ್ದಾನೆ. ತಾನು ಹೋದಲೆಲ್ಲಾ ತನ್ನ ಬಳಿಯೇ ಆ ದಿಂಬನ್ನು ಇಟ್ಟುಕೊಂಡಿದ್ದಾನೆ. ಏರ್ಪೋರ್ಟ್ ನಲ್ಲಿ ತನ್ನ ಬ್ಯಾಗ್ ನ ಮುಂದೆ ಆ ದಿಂಬು ಕಂಡ ಕೆಲವರು ಪ್ರಯಾಣಿಕರು ವಿಚಲಿತರಾಗಿದ್ದಾರೆ. ಅಷ್ಟೇ ಅಲ್ಲ ಪ್ರವಾಸದಲ್ಲಿ ಡ್ರೈವಿಂಗ್ ಮಾಡುವಾಗ, ಶಾಪಿಂಗ್ ಮಾಡುವಾಗ ಮತ್ತು ಹೋಟೆಲ್‌ನಲ್ಲಿ ಉಪಹಾರ ಮಾಡುವಾಗಲೂ ತನ್ನ ಜತೆಯೇ ಇಟ್ಟುಕೊಂಡಿದ್ದ. ಇದರ ಫೋಟೋಗಳನ್ನು ಕ್ಲಿಕ್ಕಿಸಿದ ರೇಮಂಡ್ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾನೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...