alex Certify ತೂಕ ಇಳಿಸಲು ಬೆಸ್ಟ್‌ ಈ ʼಜ್ಯೂಸ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಲು ಬೆಸ್ಟ್‌ ಈ ʼಜ್ಯೂಸ್ʼ

ತೂಕ ಕಡಿಮೆ ಮಾಡುವ ಸರಳವಾದ ಆರೋಗ್ಯಕರ ಜ್ಯೂಸ್ ಅನ್ನು ಮಾಡುವ ವಿಧಾನ ತಿಳಿಯೋಣ.

ಈ ಜ್ಯೂಸ್ ಗೆ ಬೇಕಾದ ಸಾಮಗ್ರಿಗಳು:

ಸೌತೆಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು, ಶುಂಠಿ, ನಿಂಬೆ ಹಣ್ಣು, ಜೀರಿಗೆ, ದಾಲ್ಚಿನ್ನಿ. ಈ ಎಲ್ಲ ಸಾಮಗ್ರಿಗಳನ್ನೂ ಕತ್ತರಿಸಿಡಿ.

ತಯಾರಿಸುವ ವಿಧಾನ:

ಸೌತೆಕಾಯಿ ಸಿಪ್ಪೆ ಸಹಿತವಾಗಿರಲಿ. ಒಬ್ಬರಿಗೆ ಅರ್ಧ ಸೌತೆಕಾಯಿ ಇರಲಿ. ಮಿಕ್ಸಿಯಲ್ಲಿ ಸೌತೆಕಾಯಿ, ಪುದೀನಾ, ಜೀರಿಗೆ, ಕೊತ್ತಂಬರಿ ಸೊಪ್ಪು, ಶುಂಠಿ, ನಿಂಬೆ ಹಾಗೂ ದಾಲ್ಚಿನಿ ಈ ಎಲ್ಲ ಪದಾರ್ಥಗಳನ್ನು ಹಾಕಿ ರುಬ್ಬಿ. ನೀರು ಬೆರೆಸದೆ ಹಾಗೇ ಪೇಸ್ಟ್ ಮಾಡಿಕೊಳ್ಳಿ.

ಬಳಿಕ ನೀರು ಬೆರೆಸಿ ಜ್ಯೂಸ್ ಮಾಡಿ. ಇದನ್ನು ಕುಡಿಯಲು ಕಷ್ಟವಾದರೂ ಇದರಲ್ಲಿ ಜೇನುತುಪ್ಪ, ಸಕ್ಕರೆ ಅಥವಾ ಬೆಲ್ಲವನ್ನು ಬೆರೆಸಿ ಕುಡಿಯಬಾರದು.

ಇದನ್ನು ಸೋಸಬಾರದು. ಹೀಗೆ ಪ್ರತಿದಿನ ಈ ಜ್ಯೂಸ್ ಅನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಹೀಗೆ ಮೂರು ತಿಂಗಳು ಮಾಡಿದರೆ ಸ್ಪಷ್ಟ ಫಲಿತಾಂಶ ದೊರೆಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...