ತೂಕ ಕಡಿಮೆ ಮಾಡುವ ಸರಳವಾದ ಆರೋಗ್ಯಕರ ಜ್ಯೂಸ್ ಅನ್ನು ಮಾಡುವ ವಿಧಾನ ತಿಳಿಯೋಣ.
ಈ ಜ್ಯೂಸ್ ಗೆ ಬೇಕಾದ ಸಾಮಗ್ರಿಗಳು:
ಸೌತೆಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು, ಶುಂಠಿ, ನಿಂಬೆ ಹಣ್ಣು, ಜೀರಿಗೆ, ದಾಲ್ಚಿನ್ನಿ. ಈ ಎಲ್ಲ ಸಾಮಗ್ರಿಗಳನ್ನೂ ಕತ್ತರಿಸಿಡಿ.
ತಯಾರಿಸುವ ವಿಧಾನ:
ಸೌತೆಕಾಯಿ ಸಿಪ್ಪೆ ಸಹಿತವಾಗಿರಲಿ. ಒಬ್ಬರಿಗೆ ಅರ್ಧ ಸೌತೆಕಾಯಿ ಇರಲಿ. ಮಿಕ್ಸಿಯಲ್ಲಿ ಸೌತೆಕಾಯಿ, ಪುದೀನಾ, ಜೀರಿಗೆ, ಕೊತ್ತಂಬರಿ ಸೊಪ್ಪು, ಶುಂಠಿ, ನಿಂಬೆ ಹಾಗೂ ದಾಲ್ಚಿನಿ ಈ ಎಲ್ಲ ಪದಾರ್ಥಗಳನ್ನು ಹಾಕಿ ರುಬ್ಬಿ. ನೀರು ಬೆರೆಸದೆ ಹಾಗೇ ಪೇಸ್ಟ್ ಮಾಡಿಕೊಳ್ಳಿ.
ಬಳಿಕ ನೀರು ಬೆರೆಸಿ ಜ್ಯೂಸ್ ಮಾಡಿ. ಇದನ್ನು ಕುಡಿಯಲು ಕಷ್ಟವಾದರೂ ಇದರಲ್ಲಿ ಜೇನುತುಪ್ಪ, ಸಕ್ಕರೆ ಅಥವಾ ಬೆಲ್ಲವನ್ನು ಬೆರೆಸಿ ಕುಡಿಯಬಾರದು.
ಇದನ್ನು ಸೋಸಬಾರದು. ಹೀಗೆ ಪ್ರತಿದಿನ ಈ ಜ್ಯೂಸ್ ಅನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಹೀಗೆ ಮೂರು ತಿಂಗಳು ಮಾಡಿದರೆ ಸ್ಪಷ್ಟ ಫಲಿತಾಂಶ ದೊರೆಯುತ್ತದೆ.