alex Certify ಮಹಿಳೆಯರೊಂದಿಗೆ ಬರುವ ಪುರುಷರಿಗೆ ಮಾತ್ರ ಈ ರೆಸ್ಟೋರೆಂಟ್ ಪ್ರವೇಶ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರೊಂದಿಗೆ ಬರುವ ಪುರುಷರಿಗೆ ಮಾತ್ರ ಈ ರೆಸ್ಟೋರೆಂಟ್ ಪ್ರವೇಶ…!

ಜೈಪುರ: ದೆಹಲಿಯ ರೆಸ್ಟೋರೆಂಟ್ ಒಂದು ಸೀರೆ ಧರಿಸಿ ಬಂದ ನಾರಿಗೆ ಪ್ರವೇಶ ನೀಡುವುದಿಲ್ಲ ಎಂದು ಹೇಳಿದ್ದ ಮಾಹಿತಿ ಆನ್ಲೈನ್ ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಜೈಪುರ ರೆಸ್ಟೋರೆಂಟ್ ಕೂಡ ಆನ್ಲೈನ್ ನಲ್ಲಿ ಸಂಚಲನ ಮೂಡಿಸಿದೆ.

ಟ್ವಿಟ್ಟರ್ ಬಳಕೆದಾರರು ತಾವು ಕುಳಿತಿದ್ದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಮೇಲಿದ್ದ ಭಿತ್ತಿ ಪತ್ರದಲ್ಲಿ, “ಮಹಿಳೆಯರೊಂದಿಗೆ ಬರುವ ಪುರುಷರಿಗೆ ಮಾತ್ರ ಅವಕಾಶ” ಎಂದು ಇದರಲ್ಲಿ ಬರೆಯಲಾಗಿದೆ. ಜೈಪುರದ ಗೋಪಿ ಭೋಜನಾಲಯದಲ್ಲಿ ಈ ರೀತಿ ವಿಶಿಷ್ಟ ಭಿತ್ತಿಪತ್ರ ಬರೆಯಲಾಗಿದೆ. ಹರ್ಷಿತಾ ಶರ್ಮಾ ಎಂಬುವವರು ಟ್ವಿಟ್ಟರ್ ನಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.

ಸದ್ಯ ಈ ಪೋಸ್ಟ್ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಭಾರಿ ವೈರಲ್ ಆಗಿದೆ. 15,400 ಕ್ಕೂ ಹೆಚ್ಚು ಲೈಕ್‌ಗಳು ಮತ್ತು 1,000 ರಿಟ್ವೀಟ್‌ಗಳನ್ನು ಗಳಿಸಿದೆ. ಒಬ್ಬ ಬಳಕೆದಾರರು, ಕುಡುಕರು ಮತ್ತು ರೌಡಿಗಳನ್ನು ಹೊರಗಿಡಲು ಆಸಕ್ತಿದಾಯಕ ವಿಚಾರ ಎಂದು ಹೇಳಿದ್ದರೆ, ಮತ್ತೊಬ್ಬರು, #ಸಿಂಗಲ್ ಲೈಫ್…. ಎಲ್ಲಾ ರೆಸ್ಟೋರೆಂಟ್‌ಗಳು ಈ ನಿಯಮವನ್ನು ಜಾರಿಗೊಳಿಸಿದರೆ, ನಾನು ಹಸಿವಿನಿಂದ ಸಾಯುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...