alex Certify ಶಾಲೆಗಳು ತೆರೆಯದೆ ಮಕ್ಕಳು ಕಳೆದುಕೊಂಡಿರುವುದು ಇದನ್ನೇ ಎಂದ ದೆಹಲಿ ಡಿಸಿಎಂ: ವಿದ್ಯಾರ್ಥಿಗಳೊಂದಿಗಿನ ವಿಡಿಯೋ ಹಂಚಿಕೊಂಡ ಸಿಸೋಡಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಗಳು ತೆರೆಯದೆ ಮಕ್ಕಳು ಕಳೆದುಕೊಂಡಿರುವುದು ಇದನ್ನೇ ಎಂದ ದೆಹಲಿ ಡಿಸಿಎಂ: ವಿದ್ಯಾರ್ಥಿಗಳೊಂದಿಗಿನ ವಿಡಿಯೋ ಹಂಚಿಕೊಂಡ ಸಿಸೋಡಿಯಾ

ನವದೆಹಲಿ: ಸೋಮವಾರ ದೇಶದ ಹಲವಾರು ರಾಜ್ಯಗಳಲ್ಲಿ ಶಾಲೆಗಳು ಪುನರಾರಂಭವಾಗಿವೆ. ತಮ್ಮ ತರಗತಿಗಳಿಗೆ ಹಿಂತಿರುಗಿದ ವಿದ್ಯಾರ್ಥಿಗಳ ಜೊತೆ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಂವಾದ ನಡೆಸಿದ್ದಾರೆ.

ಕೆಲವು ತಿಂಗಳುಗಳ ಕೋವಿಡ್-19 ವಿರಾಮದ ನಂತರ ದೆಹಲಿಯಲ್ಲಿ ಶೇಕಡಾ 50ರಷ್ಟು ವಿದ್ಯಾರ್ಥಿಗಳ ಹಾಜರಾತಿಯೊಂದಿಗೆ ಶಾಲೆಗಳು ಪುನಃ ತೆರೆಯಲ್ಪಟ್ಟಿವೆ. ಟ್ವಿಟ್ಟರ್‌ನಲ್ಲಿ, ಸಿಸೋಡಿಯಾ ಅವರು ಸ್ಪೆಷಲ್ ಡಾಕ್ಟರ್ಸ್ ರೊಂದಿಗೆ ವಿಡಿಯೋ ಹಂಚಿಕೊಂಡಿದ್ದು, ಇದನ್ನೇ ಮಕ್ಕಳು ಮಿಸ್ ಮಾಡಿಕೊಂಡಿದ್ದು ಎಂಬುದಾಗಿ ಹೇಳಿದ್ದಾರೆ. ಅಲ್ಲದೆ ಶಾಲೆಗಳನ್ನು ಏಕೆ ಪುನಾರರಂಭಿಸಬೇಕು ಎನ್ನುವುದು ಈ ವಿಡಿಯೋ ನೋಡಿದ್ರೆ ತಿಳಿಯುತ್ತದೆ ಎಂದು ದೆಹಲಿ ಶಿಕ್ಷಣ ಸಚಿವರು ಹೇಳಿದ್ದಾರೆ.

ಎಲ್ಲಾ ಕೋವಿಡ್ ಪ್ರೋಟೋಕಾಲ್ ಗಳೊಂದಿಗೆ ಶಾಲೆಗಳನ್ನು ಮತ್ತೆ ಪುನರಾರಂಭಿಸಲಾಗಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...