ನವದೆಹಲಿ: ಸೋಮವಾರ ದೇಶದ ಹಲವಾರು ರಾಜ್ಯಗಳಲ್ಲಿ ಶಾಲೆಗಳು ಪುನರಾರಂಭವಾಗಿವೆ. ತಮ್ಮ ತರಗತಿಗಳಿಗೆ ಹಿಂತಿರುಗಿದ ವಿದ್ಯಾರ್ಥಿಗಳ ಜೊತೆ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಂವಾದ ನಡೆಸಿದ್ದಾರೆ.
ಕೆಲವು ತಿಂಗಳುಗಳ ಕೋವಿಡ್-19 ವಿರಾಮದ ನಂತರ ದೆಹಲಿಯಲ್ಲಿ ಶೇಕಡಾ 50ರಷ್ಟು ವಿದ್ಯಾರ್ಥಿಗಳ ಹಾಜರಾತಿಯೊಂದಿಗೆ ಶಾಲೆಗಳು ಪುನಃ ತೆರೆಯಲ್ಪಟ್ಟಿವೆ. ಟ್ವಿಟ್ಟರ್ನಲ್ಲಿ, ಸಿಸೋಡಿಯಾ ಅವರು ಸ್ಪೆಷಲ್ ಡಾಕ್ಟರ್ಸ್ ರೊಂದಿಗೆ ವಿಡಿಯೋ ಹಂಚಿಕೊಂಡಿದ್ದು, ಇದನ್ನೇ ಮಕ್ಕಳು ಮಿಸ್ ಮಾಡಿಕೊಂಡಿದ್ದು ಎಂಬುದಾಗಿ ಹೇಳಿದ್ದಾರೆ. ಅಲ್ಲದೆ ಶಾಲೆಗಳನ್ನು ಏಕೆ ಪುನಾರರಂಭಿಸಬೇಕು ಎನ್ನುವುದು ಈ ವಿಡಿಯೋ ನೋಡಿದ್ರೆ ತಿಳಿಯುತ್ತದೆ ಎಂದು ದೆಹಲಿ ಶಿಕ್ಷಣ ಸಚಿವರು ಹೇಳಿದ್ದಾರೆ.
ಎಲ್ಲಾ ಕೋವಿಡ್ ಪ್ರೋಟೋಕಾಲ್ ಗಳೊಂದಿಗೆ ಶಾಲೆಗಳನ್ನು ಮತ್ತೆ ಪುನರಾರಂಭಿಸಲಾಗಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.