ಹಾಲು ಆರೋಗ್ಯಕ್ಕೆ ಉತ್ತಮ ನಿಜ. ಇದರಲ್ಲಿ ಪ್ರೋಟೀನ್, ವಿಟಮಿನ್ ಗಳು ಅಧಿಕ ಪ್ರಮಾಣದಲ್ಲಿದೆ. ಆದರೆ ಹಾಲನ್ನು ಸರಿಯಾದ ಸಮಯದಲ್ಲಿ ಸೇವಿಸಿದರೆ ಮಾತ್ರ ಅದರಿಂದ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಇಲ್ಲವಾದರೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಹಾಗಾದ್ರೆ ಹಾಲನ್ನು ಯಾವಾಗ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಹಾಲನ್ನು ಬೆಳಿಗ್ಗೆ ಕುಡಿದರೆ ಉತ್ತಮ . ಯಾಕೆಂದರೆ ಹಾಲನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು.
ಆದರೆ ಅಸ್ತಮಾ, ಸಂಧಿವಾತ ಸಮಸ್ಯೆ ಇರುವವರು ರಾತ್ರಿಯಲ್ಲಿ ಹಾಲು ಕುಡಿಯುವುದನ್ನು ತಪ್ಪಿಸಬೇಕು. ಯಾಕೆಂದರೆ ಇದರಿಂದ ನಿಮಗೆ ಕಫದ ಸಮಸ್ಯೆ ಕಾಡುತ್ತದೆ, ಕೀಲುಗಳಲ್ಲಿ ಊತ ಕಂಡುಬರುತ್ತದೆ. ಒಂದು ವೇಳೆ ಕುಡಿಯಬೇಕೆಂದರೆ ಹಾಲಿಗೆ ಅರಶಿನ ಬೆರೆಸಿ ರಾತ್ರಿ ಸೇವಿಸಿ.