ಮಳೆಗಾಲದಲ್ಲಿ ಕೂದಲು ಉದುರುವುದು ಸಾಮಾನ್ಯ ಸಮಸ್ಯೆ. ಆದ್ರೆ ಕೆಲವರಿಗೆ ಅತಿಯಾಗಿ ಕೂದಲು ಉದುರುತ್ತದೆ. ಇದರ ನಿಯಂತ್ರಣಕ್ಕೆ ಜನರು ಮತ್ತಷ್ಟು ರಾಸಾಯನಿಕ ವಸ್ತುಗಳ ಬಳಕೆ ಮಾಡ್ತಾರೆ. ಇದ್ರಿಂದ ಕೂದಲು ಬೆಳೆಯುವ ಬದಲು ಹೆಚ್ಚು ಉದುರುತ್ತದೆ. ಕೂದಲು ಉದುರಲು ಅನೇಕ ಕಾರಣವಿದೆ.
ಕೆಲವರು ಕೂದಲ ಆರೈಕೆಗೆ ಅನೇಕ ರಾಸಾಯನಿಕ ವಸ್ತುಗಳನ್ನು ಬಳಸ್ತಾರೆ. ಶಾಂಪೂ, ಹೇರ್ ಕಂಡೀಷನರ್ ಜೊತೆ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಕೂದಲಿಗೆ ಬಳಸ್ತಾರೆ. ಹೇರ್ ಕಲರ್ ಕೂಡ ಕೂದಲು ಉದುರಲು ಕಾರಣವಾಗುತ್ತದೆ.
ಕೂದಲಿಗೆ ಎಣ್ಣೆ ಅತ್ಯಗತ್ಯ. ಅನೇಕರು ಜಿಡ್ಡಿನ ಕಾರಣಕ್ಕೆ ಕೂದಲಿಗೆ ಎಣ್ಣೆ ಹಾಕುವುದಿಲ್ಲ. ಕೂದಲಿಗೆ ಶಾಂಪೂ ಹಾಕುವ ಒಂದು ಗಂಟೆ ಮೊದಲು ಎಣ್ಣೆ ಹಾಕಬೇಕು.
ಎಣ್ಣೆಯುಕ್ತ, ತ್ವರಿತ ಆಹಾರ ಅಥವಾ ಅನಾರೋಗ್ಯಕರ ಆಹಾರವನ್ನು ಸೇವಿಸಿದರೆ, ದೇಹದಲ್ಲಿ ಪೋಷಕಾಂಶಗಳ ಕೊರತೆಯಾಗುತ್ತದೆ. ಇದ್ರಿಂದ ಕೂದಲು ದುರ್ಬಲಗೊಳ್ಳುತ್ತದೆ. ಮಳೆಗಾಲದಲ್ಲಿ ವಿಶೇಷವಾಗಿ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಹಸಿರು ತರಕಾರಿಗಳು, ಸಲಾಡ್, ಮೊಸರು, ಮಜ್ಜಿಗೆ, ತಾಜಾ ಹಣ್ಣುಗಳು ಮತ್ತು ಮೊಳಕೆ ಇತ್ಯಾದಿಗಳನ್ನು ಸೇವಿಸಬೇಕು.
ಒದ್ದೆಯಾದ ಕೂದಲನ್ನು ಅನೇಕ ಬಾರಿ ಬಾಚುತ್ತೇವೆ. ಇದ್ರಿಂದ ಕೂದಲು ದುರ್ಬಲವಾಗುತ್ತದೆ. ಕೂದಲು ಉದುರಲು ಪ್ರಾರಂಭವಾಗುತ್ತದೆ. ಮಳೆಗಾಲದಲ್ಲಿ ಮಳೆಗೆ ಒದ್ದೆಯಾದ ಕೂದಲನ್ನು ತಕ್ಷಣ ಬಾಚಬಾರದು.