ಕೆಲವೊಮ್ಮೆ ಮನುಷ್ಯನ ಕರುಣೆಗೆ ಮಿತಿ ಇಲ್ಲ. ಆದರೆ ಅದು ಈಗಿನ ಜಗತ್ತಿನಲ್ಲಿ ಅತಿ ವಿರಳವಾಗಿದೆ. ಪ್ರಾಣಿಗಳ ಮೇಲೆ ಬಹುತೇಕ ಬಾರಿ ಆತ ತೋರಿಸುವ ದಯೆ, ಕರುಣೆಗಳು ತನ್ನೊಡನೆಯೇ ದಿನಂಪ್ರತಿ ಇರುವವರ ಕಷ್ಟ-ನೋವುಗಳ ಪರಿಹಾರಕ್ಕೆ ಆತ ತೋರಿಸುತ್ತಿಲ್ಲ.
ಆದರೆ, ಇದಕ್ಕೆಲ್ಲ ಆಕ್ಷೇಪ ಎಂಬಂತೆ ಅಮೆರಿಕದ ಜಾರ್ಜಿಯಾ ರಾಜ್ಯದ ಯೂನಿಟಿ ಗ್ರೋವ್ ಎಲಿಮೆಂಟರಿ ಸ್ಕೂಲ್‌ನಲ್ಲಿ ಬೋಧಕ ಸಿಬ್ಬಂದಿ ಒಂದಾಗಿ ಸಹೋದ್ಯೋಗಿಯೊಬ್ಬರಿಗೆ ಕಾರು ಕೊಡಿಸಿದ್ದಾರೆ !
ಹೌದು, ಕ್ರೇಗ್ ಜಾನ್ಸನ್ ಬಹಳ ಆರ್ಥಿಕ ಸಂಕಷ್ಟದಲ್ಲಿ ಮುಳುಗಿದ್ದರು. ಅವರು ಹಲವು ವರ್ಷಗಳಿಂದ ನಡೆದುಕೊಂಡೇ ಶಾಲೆಗೆ ಬರುತ್ತಿದ್ದರು.
ಸಹೋದ್ಯೋಗಿಗಳ ಜತೆಗೆ ಸ್ನೇಹದಿಂದ ಬೆರೆಯುತ್ತಿದ್ದರು. ಪುನಃ ಕಿಲೋಮೀಟರ್‌ಗಟ್ಟಲೇ ನಡೆದುಕೊಂಡೇ ಮನೆ ಸೇರುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಶಾಲಾ ಸಿಬ್ಬಂದಿ, ಎಲ್ಲರೂ ಉಪಾಯ ಮಾಡಿಕೊಂಡು ಸ್ವಲ್ಪವೇ ಹಣ ಶೇಖರಣೆ ಶುರು ಮಾಡಿದರು. ಅದು ಒಂದು ಕಾರು ಖರೀದಿ ಮಾಡುವಷ್ಟರ ಪ್ರಮಾಣಕ್ಕೆ ಆದಾಗ, ಕಾರನ್ನು ಕೊಂಡು ಶಾಲಾ ಆವರಣದಲ್ಲಿ ನಿಲ್ಲಿಸಿಬಿಟ್ಟರು.
ಏಕಾಏಕಿ ಪ್ರತ್ಯಕ್ಷವಾದ ಹಾವು ಕಂಡು ಬೆಚ್ಚಿಬಿದ್ಲು ಮಹಿಳೆ
ಮರುದಿನ ಎಂದಿನಂತೆ ಕ್ರೇಗ್ ಬಂದಾಗ ಅವರಿಗೆ ಅಚ್ಚರಿ ಕಾದಿತ್ತು, ಎಲ್ಲ ಸಹೋದ್ಯೋಗಿಗಳು ಕೂಡ ಕ್ರೇಗ್‌ರನ್ನು ಕರೆದೊಯ್ದು ಹೊಸ ಕಾರಿನ ಮುಂದೆ ನಿಲ್ಲಿಸಿ, ತಗೋ ಇದು ನಿಂದು ಎಂದರು.
ಆನಂದಬಾಷ್ಪ ಸುರಿಸುತ್ತಾ ಕ್ರೇಗ್ ಅವರು ಸಹೋದ್ಯೋಗಿಗಳನ್ನು ತಬ್ಬಿ ಮುದ್ದಾಡಿದರು. ಈ ವಿಡಿಯೊ ತುಣುಕು ರೆಕ್ಸ್ ಛಾಪ್‌ಮ್ಯಾನ್ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೆಯಾಗಿ, ಭಾರಿ ವೈರಲ್ ಕೂಡ ಆಗಿದೆ.
’ದೇವರೆ ಈ ಕೆಲಸ ಮಾಡಲು ಧರೆಗೆ ಇಳಿದು ಬಂದಿದ್ದಾನೆ’ ಎಂದು ಒಬ್ಬರು ಮಾಡಿರುವ ಪ್ರತಿಕ್ರಿಯೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.