alex Certify ಇವರು ಶಶಿ ತರೂರ್​ ಅಲ್ಲ, ಚಂದ್ರಚೂಡ ಸಿಂಗ್…..​! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇವರು ಶಶಿ ತರೂರ್​ ಅಲ್ಲ, ಚಂದ್ರಚೂಡ ಸಿಂಗ್…..​!

ಪ್ರಪಂಚದಲ್ಲಿ ಒಬ್ಬರಂತೆ ಹೋಲಿಕೆ ಇರುವ ಏಳು ಮಂದಿ ಇರುತ್ತಾರೆಂಬ ನಂಬಿಕೆ ಇದೆ. ಈಗ ವೈರಲ್​ ಆಗಿರುವ ವಿಡಿಯೋದಲ್ಲಿ ಕಾಂಗ್ರೆಸ್​ ಸಂಸದ ಶಶಿ ತರೂರ್​ ರೀತಿಯೇ ಇರುವ ಚಂದ್ರಚೂಡ​ ಸಿಂಗ್​ ಎಂಬ ವ್ಯಕ್ತಿ ಎಂತವರನ್ನು ಗೊಂದಲಕ್ಕೆ ತಳ್ಳಿಬಿಡುತ್ತಾರೆ.

ಮುಂಬೈನಲ್ಲಿ ಭಾನುವಾರ ನಡೆದ ಟ್ರೇಲರ್​ ಬಿಡುಗಡೆ ಸಮಾರಂಭದಲ್ಲಿ ಚಂದ್ರಚೂಡ್​ ಭಾಗವಹಿಸಿದ್ದರು. ಸ್ಥಳಕ್ಕೆ ಆಗಮಿಸಿದ ನಟನ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.

ನಟನು ನೀಲಿ ಬಣ್ಣದ ಬ್ಲೇಜರ್​ ಮತ್ತು ಪ್ಯಾಂಟ್​ ಧರಿಸಿದ್ದು, ಜನರು ಚಂದ್ರಚೂಡ್​ ಸಿಂಗ್​ ಮತ್ತು ಶಶಿ ತರೂರ್​ ತೋರಿಕೆಯ ಹೋಲಿಕೆಯನ್ನು ಕಡೆಗಣಿಸಲಾಗಲಿಲ್ಲ.

ಈ ವಿಡಿಯೋ ನೆಟಿಜನ್​ಗಳಲ್ಲಿ ಚರ್ಚೆಗೆ ಕಾರಣವಾಗಿತ್ತು. ಶಶಿ ತರೂರ್​ ಅವರ ಜೀವನಚರಿತ್ರೆ ಎಂದಾದರೂ ತಯಾರಾದರೆ ಅವರ ಪಾತ್ರವನ್ನು ನಿರ್ವಹಿಸಲು ಚಂದ್ರಚೂಡ್​ ಸೂಕ್ತ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. “ಶಶಿ ತರೂರ್​ ಬಯೋಪಿಕ್​ ನಲ್ಲಿ ಕೆಲಸ ಮಾಡಬೇಕು” ಎಂದು ಮತ್ತೊಬ್ಬರು ಕಾಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...