
ಪ್ರಪಂಚದಲ್ಲಿ ಒಬ್ಬರಂತೆ ಹೋಲಿಕೆ ಇರುವ ಏಳು ಮಂದಿ ಇರುತ್ತಾರೆಂಬ ನಂಬಿಕೆ ಇದೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ರೀತಿಯೇ ಇರುವ ಚಂದ್ರಚೂಡ ಸಿಂಗ್ ಎಂಬ ವ್ಯಕ್ತಿ ಎಂತವರನ್ನು ಗೊಂದಲಕ್ಕೆ ತಳ್ಳಿಬಿಡುತ್ತಾರೆ.
ಮುಂಬೈನಲ್ಲಿ ಭಾನುವಾರ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಂದ್ರಚೂಡ್ ಭಾಗವಹಿಸಿದ್ದರು. ಸ್ಥಳಕ್ಕೆ ಆಗಮಿಸಿದ ನಟನ ಚಿತ್ರಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.
ನಟನು ನೀಲಿ ಬಣ್ಣದ ಬ್ಲೇಜರ್ ಮತ್ತು ಪ್ಯಾಂಟ್ ಧರಿಸಿದ್ದು, ಜನರು ಚಂದ್ರಚೂಡ್ ಸಿಂಗ್ ಮತ್ತು ಶಶಿ ತರೂರ್ ತೋರಿಕೆಯ ಹೋಲಿಕೆಯನ್ನು ಕಡೆಗಣಿಸಲಾಗಲಿಲ್ಲ.
ಈ ವಿಡಿಯೋ ನೆಟಿಜನ್ಗಳಲ್ಲಿ ಚರ್ಚೆಗೆ ಕಾರಣವಾಗಿತ್ತು. ಶಶಿ ತರೂರ್ ಅವರ ಜೀವನಚರಿತ್ರೆ ಎಂದಾದರೂ ತಯಾರಾದರೆ ಅವರ ಪಾತ್ರವನ್ನು ನಿರ್ವಹಿಸಲು ಚಂದ್ರಚೂಡ್ ಸೂಕ್ತ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. “ಶಶಿ ತರೂರ್ ಬಯೋಪಿಕ್ ನಲ್ಲಿ ಕೆಲಸ ಮಾಡಬೇಕು” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.