ಕಡಲೆ ಹಿಟ್ಟು ಸೌಂದರ್ಯದ ವಿಷಯದಲ್ಲಿ ಮಾಡುವ ಅದ್ಭುತಗಳು ಒಂದೆರಡಲ್ಲ. ಯಾವುದೇ ಅಡ್ಡಪರಿಣಾಮ ಇಲ್ಲದೆ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವ ಏಕೈಕ ಸಾಮಾಗ್ರಿ ಎಂದರೆ ಕಡಲೆ ಹಿಟ್ಟು.
ಕಡಲೆ ಹಿಟ್ಟಿನಿಂದ ಮುಖದ ಕಲೆ ದೂರವಾಗುತ್ತದೆ. ಬಿಸಿಲಿನಿಂದ ನಿಮ್ಮ ತ್ವಚೆ ಕಪ್ಪಗಾಗಿದ್ದರೆ ಅದನ್ನು ಹೋಗಲಾಡಿಸುತ್ತದೆ. ತ್ವಚೆಯನ್ನು ಮೃದುವಾಗಿಸಿ ಕಾಂತಿಯುತವಾಗಿಸುತ್ತದೆ.
ಮೊದಲು ಕಡಲೆಹಿಟ್ಟಿಗೆ ತುಸು ಹಾಲು ಬೆರೆಸಿ, ಕೇಸರಿ ಹಾಕಿ ಐದು ನಿಮಿಷ ನೆನೆಯಲು ಬಿಡಿ. ಬಳಿಕ ನಿಮ್ಮ ಮುಖಕ್ಕೆ ಪೇಸ್ಟ್ ರೀತಿಯಲ್ಲಿ ಹಚ್ಚಿಕೊಳ್ಳಿ. 30 ನಿಮಿಷಗಳ ಬಳಿಕ ಮುಖ ತೊಳೆದರೆ ನಿಮ್ಮ ತ್ವಚೆ ಹೊಳಪು ಪಡೆದುಕೊಳ್ಳುವುದನ್ನು ನೀವೇ ಕಾಣಬಹುದು.
ಕಡಲೆಹಿಟ್ಟಿಗೆ ನಿಂಬೆರಸ ಸೇರಿಸಿ, ಚಿಟಿಕೆ ಅರಶಿನ ಉದುರಿಸಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಡೆಡ್ ಸ್ಕಿನ್ ದೂರವಾಗಿ ತ್ವಚೆ ಬೆಳ್ಳಗಾಗುತ್ತದೆ. ಮೊಡವೆಗಳನ್ನೂ ದೂರ ಮಾಡುವ ಇದು ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ.