ವಿಮಾನಯಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ವಿಮಾನಗಳ ಮೇಲಿನ ತಮ್ಮ ಪ್ರೀತಿಯನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ತಮಗೆ ಈ ಆಟಿಕೆ ವಿಮಾನಗಳೆಂದರೆ ಭಾರೀ ಇಷ್ಟವೆನ್ನುವ ಸಾಂಡ್ರಾ, ಪ್ರತಿ ಬೆಳಿಗ್ಗೆ ಹಾಗೂ ರಾತ್ರಿ ಅವುಗಳಿಗೆ ಮುತ್ತಿಕ್ಕಿ ವಿಶ್ ಮಾಡುತ್ತಾರೆ.
ಹಂಗೆರಿಯ ಬುಡಾಪೆಸ್ಟ್‌ನ 28 ವರ್ಷ ವಯಸ್ಸಿನ ಈ ಮಹಿಳೆ, ಆಟಿಕೆಯೊಂದಿಗೆ ತಮ್ಮ ರೊಮ್ಯಾನ್ಸ್‌ಅನ್ನು ಇದೇ ಜನವರಿಯಿಂದ ಆರಂಭಿಸಿದ್ದಾರೆ. ’ಲುಫ್ಫಾಂಕ್ಸ್’ ಎಂದು ತಮ್ಮದೇ ಭಾಷೆಯಲ್ಲಿ ಈ ಆಟಿಕೆಯನ್ನು ಕರೆಯುವ ಈಕೆ, ಆನ್ಲೈನ್‌ನಲ್ಲಿ ಆಟಿಕೆಯನ್ನು 600 ಪೌಂಡ್ (60,796 ರೂ.) ತೆತ್ತು ಖರೀದಿ ಮಾಡಿದ್ದಾರೆ.
BIG NEWS: ಗಗನಕ್ಕೇರಿದ ಕಚ್ಚಾತೈಲ ದರ, ದೇಶದಲ್ಲಿಂದು ಬದಲಾಗದೇ ಉಳಿದ ಪೆಟ್ರೋಲ್ ಬೆಲೆ
ಈ ಆಟಿಕೆಯನ್ನು ತೀರಾ ತಮ್ಮ ಪ್ರಿಯಕರನೇನೋ ಎಂಬಂತೆ “ನಾನೇಕೆ ಆತನನ್ನು ಇಷ್ಟ ಪಡುತ್ತೇನೆ ಎಂಬುದೇ ಗೊತ್ತಿಲ್ಲ, ಆದರೆ ಆತನನ್ನು ನಾನು ಪ್ರೀತಿಸುತ್ತೇನೆ” ಎಂದಿದ್ದಾರೆ ಸಾಂಡ್ರಾ.
“ಈತ ಸುಂದರವಾಗಿದ್ದಾನೆ ಮತ್ತು ನನ್ನ ಆತ್ಮಬಂಧು. ಬೆಳಿಗ್ಗೆ ಎದ್ದ ಕೂಡಲೇ ಮೊದಲ ಬಾರಿಗೆ ಹಾಗೂ ರಾತ್ರಿ ಮಲಗುವ ಮುನ್ನ ಕೊನೆಯ ಬಾರಿಗೆ ನಾನು ಇವನನ್ನೇ ನೋಡುವುದು. ನನಗೆ ಸಂಗಾತಿಯೊಂದಿಗೆ ಹೀಗೆ ಎಂದೂ ಭಾಸವಾಗಿಲ್ಲ. ಜೀವನದಲ್ಲಿ ಮೊದಲ ಬಾರಿಗೆ ನಾನು ಪ್ರೀತಿಯಲ್ಲಿ ಬಿದ್ದಿದ್ದೇನೆ. ನನಗೆ ಸರಾಸರಿ ವ್ಯಕ್ತಿಗಿಂತ ವಿಮಾನಗಳು ಯಾವಾಗಲೂ ಇಷ್ಟ. ವೀಕೆಂಡ್‌ಗೆ ಹೊರಗೆ ಹೋಗುವ ಸಂದರ್ಭದಲ್ಲಿ ನಾನು ಆತನನ್ನು ನನ್ನೊಂದಿಗೆ ಕರೆದೊಯ್ಯುತ್ತೇನೆ ಎಂದು ಖಾತ್ರಿ ಮಾಡಿಕೊಳ್ಳುತ್ತೇನೆ. ಆತ ಯಾವಾಗಲೂ ನನ್ನೊಂದಿಗೆ ಇದ್ದಾನೆ. ನಾನು ಮರಳಿ ಮಾನವ ಸಂಬಂಧಕ್ಕೆ ತೆರಳುತ್ತೇನೆ ಎಂದು ಖಾತ್ರಿ ಇಲ್ಲ” ಎನ್ನುತ್ತಾರೆ ಸಾಂಡ್ರಾ.