alex Certify BIG NEWS: ಗಗನಕ್ಕೇರಿದ ಕಚ್ಚಾತೈಲ ದರ, ದೇಶದಲ್ಲಿಂದು ಬದಲಾಗದೇ ಉಳಿದ ಪೆಟ್ರೋಲ್ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗಗನಕ್ಕೇರಿದ ಕಚ್ಚಾತೈಲ ದರ, ದೇಶದಲ್ಲಿಂದು ಬದಲಾಗದೇ ಉಳಿದ ಪೆಟ್ರೋಲ್ ಬೆಲೆ

ನವದೆಹಲಿ: ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಲಕ್ನೋದಲ್ಲಿ ಇಂದು ಪೆಟ್ರೋಲ್ ಮತ್ತು ಡೀಸೆಲ್ ದರ ಬದಲಾಗದೇ ಉಳಿದಿವೆ.

ಪೂರೈಕೆ-ಬೇಡಿಕೆ ಅಸಮತೋಲನದ ಹಿನ್ನೆಲೆಯಲ್ಲಿ ಕಚ್ಚಾತೈಲ ಬೆಲೆಗಳು ಗಗನಕ್ಕೇರಿದ್ದರೂ ಸಹ ತೈಲ ಮಾರುಕಟ್ಟೆ ಕಂಪನಿಗಳು(OMC) ಮಾರ್ಚ್ 8 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಿಲ್ಲ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ ಲೀಟರ್‌ಗೆ 95.41 ರೂ ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 86.67 ರೂ ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 109.98 ಮತ್ತು 91.09 ರೂ. ಇದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಚಿಲ್ಲರೆ ದರಗಳನ್ನು ದಾಖಲೆಯ ಗರಿಷ್ಠ ಮಟ್ಟದಿಂದ ಇಳಿಸಲು ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಇಂಧನ ಬೆಲೆ ಸ್ಥಿರವಾಗಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸೇರಿದಂತೆ ಸಾರ್ವಜನಿಕ ವಲಯದ OMC ಗಳು ಬೆಂಚ್ಮಾರ್ಕ್ ಅಂತರಾಷ್ಟ್ರೀಯ ಬೆಲೆ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಪ್ರತಿದಿನ ಇಂಧನ ಬೆಲೆಗಳನ್ನು ಪರಿಷ್ಕರಿಸುತ್ತವೆ.

OMC ಗಳು ಸುಮಾರು 100 ದಿನಗಳ ಕಾಲ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಿಲ್ಲ ಅಥವಾ ಕಡಿಮೆ ಮಾಡಿಲ್ಲ. ಆದರೆ ಅಂತಾರಾಷ್ಟ್ರೀಯ ತೈಲ ಬೆಲೆಗಳು ಅಸ್ಥಿರವಾಗಿಯೇ ಉಳಿದಿವೆ. ಸ್ಥಳೀಯ ಸರ್ಕಾರ ಪೆಟ್ರೋಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) 30% ರಿಂದ 19.40% ಕ್ಕೆ ಇಳಿಸಿದ ನಂತರ ದೆಹಲಿಯಲ್ಲಿ ಡಿಸೆಂಬರ್ 1 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇತ್ತೀಚಿನ ಬದಲಾವಣೆಯಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಪ್ರತಿದಿನ ಬೆಳಿಗ್ಗೆ 6 ರಿಂದ ಜಾರಿಗೆ ತರಲಾಗುತ್ತದೆ. ವ್ಯಾಟ್ ಅಥವಾ ಸರಕು ಸಾಗಣೆ ಶುಲ್ಕಗಳಂತಹ ಸ್ಥಳೀಯ ತೆರಿಗೆಗಳ ಕಾರಣದಿಂದಾಗಿ ಚಿಲ್ಲರೆ ಪೆಟ್ರೋಲ್, ಡೀಸೆಲ್ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.

ದೇಶೀಯ ಚಿಲ್ಲರೆ ಬೆಲೆಗಳು ಮತ್ತು ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸರ್ಕಾರವು ಶೀಘ್ರದಲ್ಲೇ ಬೆಲೆಗಳನ್ನು ಪರಿಷ್ಕರಿಸಲು ಪ್ರಾರಂಭಿಸಬಹುದು ಎಂದು ಹೇಳಲಾಗಿದೆ. 5 ರಾಜ್ಯಗಳ ಚುನಾವಣೆ ಮುಗಿದಿದ್ದು, ಇಂದು ದರ ಏರಿಕೆಯಾಗಬಹುದು. ಪೆಟ್ರೋಲ್ 22 ರೂ.ವರೆಗೂ ಏರಿಕೆಯಾಗಲಿದೆ ಎನ್ನಲಾಗಿತ್ತು. ಇಂದು ದರ ಪರಿಷ್ಕರಣೆ ಮಾಡಿಲ್ಲ.

ರಷ್ಯಾ ಉಕ್ರೇನ್ ವಾರ್ ಪರಿಣಾಮ ಸೂರ್ಯಕಾಂತಿ ಎಣ್ಣೆ ಭಾರಿ ಏರಿಕೆಯಾಗಿದೆ. ನಾಳೆಯಿಂದಲೇ ಪೆಟ್ರೋಲ್, ಡೀಸೆಲ್ ದರ ಕೂಡ ಏರಿಕೆಯಾಗಲಿದ್ದು, ಇದರ ಜೊತೆಗೆ ಸರಕು ಸಾಗಣೆ ವೆಚ್ಚ ಕೂಡ ಏರಿಕೆಯಾಗುವುದರಿಂದ ಸಹಜವಾಗಿಯೇ ಅಗತ್ಯ ವಸ್ತುಗಳ ದರ ಹೆಚ್ಚಾಗಲಿದೆ ಎನ್ನಲಾಗಿದೆ.

ಗರಿಷ್ಟಮಟ್ಟಕ್ಕೆ ಕಚ್ಚಾತೈಲ ದರ

ರಷ್ಯಾದ ತೈಲ ಆಮದುಗಳ ಮೇಲೆ ಯುಎಸ್ ನಿಷೇಧದ ಸಾಧ್ಯತೆಯನ್ನು ಹೂಡಿಕೆದಾರರು ಅಳೆಯುತ್ತಿದ್ದಂತೆ ಕಚ್ಚಾ ತೈಲ ಬೆಲೆಗಳು ಮಂಗಳವಾರ ತಮ್ಮ 14 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದವು. ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ ಗೆ 130 ಡಾಲರ್ ವರೆಗೂ ತಲುಪಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...