alex Certify ನೆಟ್ಟಿಗರನ್ನು ಗಾಬರಿ ಬೀಳಿಸಿದೆ ’ಮಾನವ-ಗಾತ್ರದ’ ಬಾವಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರನ್ನು ಗಾಬರಿ ಬೀಳಿಸಿದೆ ’ಮಾನವ-ಗಾತ್ರದ’ ಬಾವಲಿ

ಕೆಲವೊಂದು ಕಾಲ್ಪನಿಕ ಜೀವಿಗಳು ಕಲ್ಪನೆಯಲ್ಲೇ ಇದ್ದರೆ ಚಂದ ಅನಿಸುತ್ತದೆ. ಒಂದು ವೇಳೆ ನಮ್ಮ ಗ್ರಹಿಕೆ ಮೀರಿದ ವಿಚಾರವನ್ನೇನಾದರೂ ಕಂಡರೆ ನಮಗೆ ಸ್ವಲ್ಪ ಗಾಬರಿಯಾಗುವುದು ಸಹಜ.

ಗಾತ್ರದಲ್ಲಿ ಮಾನವರಷ್ಟೇ ಇರುವ ಬಾವಲಿಗಳು ಕಲ್ಪನೆಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದುಕೊಂಡವರಿಗೆ ಇಲ್ಲೊಂದು ಅಚ್ಚರಿ ಕಾದಿದೆ. ಹೌದು, ಭೂಮಿ ಮೇಲೆ ಇಂಥ ಒಂದು ಬಾವಲಿ ಇದ್ದು, ಅದನ್ನು ಕಂಡವರೆಲ್ಲಾ ಗಾಬರಿ ಬೀಳುತ್ತಿದ್ದಾರೆ.

“ಫಿಲಿಪ್ಪೀನ್ಸ್‌ನ ಮಾನವನ ಗಾತ್ರದ ಬಾವಲಿಗಳಿವೆ ಎಂದು ನಾನು ಹೇಳಿದ್ದು ನಿಮಗೆ ನೆನಪಿದೆಯಾ? ಹೌದು ನಾನು ಇದರ ಬಗ್ಗೆಯೇ ಮಾತನಾಡುತ್ತಿದ್ದದ್ದು,” ಎಂದು ಟ್ವಿಟರ್‌ ಬಳಕೆದಾರರೊಬ್ಬರು ಫೋಟೋದೊಂದಿಗೆ ಪೋಸ್ಟ್ ಮಾಡಿದ್ದಾರೆ.

ಮನೆಯೊಂದರ ಹೊರಗೆ ಭಾರೀ ಬಾವಲಿಯೊಂದು ತಲೆಕೆಳಗಾಗಿ ನೇತುಹಾಕಿಕೊಂಡಿರುವ ಚಿತ್ರ ಇದಾಗಿದೆ. ’ಗೋಲ್ಡನ್-ಕ್ರೌನ್ಡ್ ಫ್ಲೈಯಿಂಗ್ ಫಾಕ್ಸ್’ ಎಂದು ಕರೆಯಲಾಗುವ ಈ ಬಾವಲಿ ವಾಸ್ತವದಲ್ಲಿ ಮಾನವ ಗಾತ್ರದ್ದು ಎನ್ನುವುದು ಕೊಂಚ ಅತಿಶಯೋಕ್ತಿ ಎನ್ನಬಹುದು. ಆದರೆ ಸಣ್ಣದೊಂದು ನಾಯಿಯಷ್ಟು ದೊಡ್ಡದಿದೆ ಈ ಬಾವಲಿ.

5.58 ಅಡಿಯಷ್ಟು ರೆಕ್ಕೆಯ ವ್ಯಾಸ ಹೊಂದಿರುವ ಈ ಬಾವಲಿ ಹಣ್ಣುಗಳನ್ನು ತಿಂದು ಬದುಕುತ್ತದೆ. ಈ ಟ್ವೀಟ್‌ ಅನ್ನು 2020ರಲ್ಲಿ ಶೇರ್‌ ಮಾಡಿದ್ದು, ಅದೀಗ ಮತ್ತೊಮ್ಮೆ ವೈರಲ್ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...