alex Certify ಮನೆ ಕಿಚನ್ ತೆಲಂಗಾಣದಲ್ಲಿದ್ರೆ, ಬೆಡ್ ರೂಂ ಮಹಾರಾಷ್ಟ್ರಕ್ಕೆ ಸೇರಿದೆ….! ಎರಡೂ ರಾಜ್ಯಕ್ಕೂ ತೆರಿಗೆ ಕಟ್ಟುತ್ತೆ ಈ ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಕಿಚನ್ ತೆಲಂಗಾಣದಲ್ಲಿದ್ರೆ, ಬೆಡ್ ರೂಂ ಮಹಾರಾಷ್ಟ್ರಕ್ಕೆ ಸೇರಿದೆ….! ಎರಡೂ ರಾಜ್ಯಕ್ಕೂ ತೆರಿಗೆ ಕಟ್ಟುತ್ತೆ ಈ ಕುಟುಂಬ

ಒಂದೇ ಮನೆಯಲ್ಲಿರುವವರು ಎರಡು ರಾಜ್ಯಗಳಿಗೆ ಆಸ್ತಿ ತೆರಿಗೆ ಕಟ್ತಿದ್ದಾರೆ. ಇಷ್ಟೇ ಅಲ್ಲ ಆ ಮನೆಯಲ್ಲಿನ ವಾಹನಗಳು ಎರಡು ರಾಜ್ಯದ ನೋಂದಣಿ ಸಂಖ್ಯೆಯನ್ನ ಹೊಂದಿವೆ.

ಅರೆ! ಇದು ಹೇಗೆ ಸಾಧ್ಯ ಅನಿಸೋದು ಸಾಮಾನ್ಯ. ಆದರೆ ಇದು ಕೂಡ ಸಾಧ್ಯವಿದೆ. ಒಂದೇ ಮನೆಯಲ್ಲಿದ್ರೂ ಆ ಕುಟುಂಬ ಎರಡು ರಾಜ್ಯಗಳಿಗೆ ಆಸ್ತಿ ತೆರಿಗೆ ಕಟ್ಟೋಕೆ ಕಾರಣವಾಗಿರೋದು ಆ ಮನೆಯಲ್ಲಿ ಅಡಿಗೆ ಕೋಣೆ ತೆಲಂಗಾಣದಲ್ಲಿದ್ರೆ, ಮಲಗುವ ಕೋಣೆ ಮಹಾರಾಷ್ಟ್ರದಲ್ಲಿದೆ. ಹೀಗಾಗಿ ಆ ಕುಟುಂಬ ಎರಡು ರಾಜ್ಯಗಳಿಗೆ ಆಸ್ತಿ ತೆರಿಗೆ ಕಟ್ಟುತ್ತಿದೆ.

ಮಹಾರಾಷ್ಟ್ರ ಮತ್ತು ತೆಲಂಗಾಣದ ಗಡಿಯಲ್ಲಿ ಚಂದ್ರಾಪುರ ಜಿಲ್ಲೆಯ ಸಿಮಾವರ್ತಿ ಜೀವತಿ ತಹಸಿಲ್‌ನ ಮಹಾರಾಜಗುಡ ಗ್ರಾಮದಲ್ಲಿ ನೆಲೆಸಿರುವ ಪವಾರ್‌ ಕುಟುಂಬ ಎರಡೂ ರಾಜ್ಯಗಳಿಗೆ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸುತ್ತಿದೆ.

13ಸದಸ್ಯರಿರುವ ಪವಾರ್ ಕುಟುಂಬ ಎರಡೂ ರಾಜ್ಯಗಳ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಮಹಾರಾಷ್ಟ್ರ ಮತ್ತು ತೆಲಂಗಾಣದ ನೋಂದಣಿ ಸಂಖ್ಯೆಗಳನ್ನು ಹೊಂದಿರುವ ವಾಹನಗಳನ್ನು ಸಹ ಹೊಂದಿದ್ದಾರೆ.

ಮಹಾರಾಜಗುಡ ಗ್ರಾಮದ ಈ 10 ಕೊಠಡಿಗಳ ಮನೆಯಲ್ಲಿ ಪವಾರ್ ಕುಟುಂಬ ವಾಸವಾಗಿದೆ. ಮನೆಯಲ್ಲಿ ನಾಲ್ಕು ಕೋಣೆಗಳು ತೆಲಂಗಾಣದ ಒಳಗೆ ಬಂದರೆ ನಾಲ್ಕು ಕೋಣೆಗಳು ಮಹಾರಾಷ್ಟ್ರ ವ್ಯಾಪ್ತಿಯಲ್ಲಿವೆ.

ಅಡುಗೆ ಮನೆ ತೆಲಂಗಾಣದಲ್ಲಿದ್ದರೆ, ಮಲಗುವ ಕೋಣೆ ಮತ್ತು ಹಾಲ್ ಮಹಾರಾಷ್ಟ್ರದಲ್ಲಿದೆ. ಇಬ್ಬರು ಸಹೋದರರಾದ ಉತ್ತಮ್ ಪವಾರ್ ಮತ್ತು ಚಂದು ಪವಾರ್ ಅವರ ಕುಟುಂಬದ ಒಟ್ಟು 13 ಸದಸ್ಯರು ಈ 10 ಕೋಣೆಗಳ ಮನೆಯಲ್ಲಿ ವರ್ಷಗಳಿಂದ ವಾಸಿಸುತ್ತಿದ್ದಾರೆ.

1969 ರಲ್ಲಿ, ಗಡಿ ಸಮಸ್ಯೆಯ ವಿವಾದವನ್ನು ಅಂತಿಮವಾಗಿ ಪರಿಹರಿಸಿದಾಗ ಪವಾರ್ ಕುಟುಂಬದ ಭೂಮಿ ಎರಡು ರಾಜ್ಯಗಳಿಗೆ ಹಂಚಿಹೋಯ್ತು. ಎರಡೂ ರಾಜ್ಯಗಳಲ್ಲಿ ಆಸ್ತಿ ತೆರಿಗೆ ಪಾವತಿಸುವುದರಿಂದ ಕುಟುಂಬಕ್ಕೆ ಇಲ್ಲಿಯವರೆಗೆ ಯಾವುದೇ ಸಮಸ್ಯೆ ಎದುರಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...