alex Certify ಹೊಟ್ಟೆ ಹುಣ್ಣಿನ ಸಮಸ್ಯೆಗೆ ಬೆಸ್ಟ್ ಈ ʼಮನೆ ಮದ್ದುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಟ್ಟೆ ಹುಣ್ಣಿನ ಸಮಸ್ಯೆಗೆ ಬೆಸ್ಟ್ ಈ ʼಮನೆ ಮದ್ದುʼ

ಜೀವನ ಶೈಲಿ ಬದಲಾಗ್ತಿದ್ದಂತೆ ಆಹಾರ ಪದ್ಧತಿಯಲ್ಲೂ ಬದಲಾವಣೆಯಾಗ್ತಿದೆ. ಇದ್ರಿಂದ ಅನೇಕ ಸಮಸ್ಯೆಗಳು ಕಾಡುತ್ತಿವೆ. ಅದ್ರಲ್ಲಿ ಹೊಟ್ಟೆಯ ಹುಣ್ಣು ( ಅಲ್ಸರ್ ) ಕೂಡ ಒಂದು. ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದೆ ಹೋದ್ರೆ ದೊಡ್ಡ ಸಮಸ್ಯೆ ಎದುರಾಗುತ್ತದೆ. ಹೊಟ್ಟೆಯಲ್ಲಿ ಆಮ್ಲ ಹೆಚ್ಚಾಗುತ್ತದೆ. ನೀವೂ ಅಲ್ಸರ್ ನಿಂದ ಬಳುತ್ತಿದ್ದರೆ ಮನೆ ಮದ್ದನ್ನು ಬಳಸಿ ಈ ರೋಗದಿಂದ ಮುಕ್ತಿ ಪಡೆಯಿರಿ.

ಹೊಟ್ಟೆ ಹುಣ್ಣಿನ ಲಕ್ಷಣ :

ಹೊಟ್ಟೆಯಲ್ಲಿ ನೋವು, ಉರಿ, ವಾಂತಿ, ಹೊಟ್ಟೆಯುಬ್ಬುವುದು, ಎದೆಯುರಿ, ಮೂತ್ರದ ಬಣ್ಣ ಬದಲಾಗುತ್ತದೆ. ತೂಕ ಇಳಿಯುವುದು. ಹಸಿವು ಹೆಚ್ಚಾಗುವುದು.

ಅಲ್ಸರ್ ಗೆ ಮನೆ ಮದ್ದು :

ಜೇನುತುಪ್ಪ : ಜೇನುತುಪ್ಪದಲ್ಲಿ ಗ್ಲುಕೋಸ್ ಪೆರಾಕ್ಸೈಡ್ ಹೆಚ್ಚಿರುತ್ತದೆ. ಇದು ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ. ಜೇನುತುಪ್ಪ ಸೇವನೆ ಮಾಡುವುದರಿಂದ ಅಲ್ಸರ್ ರೋಗಿಗೆ ನೆಮ್ಮದಿ ಸಿಗುತ್ತದೆ.

ಎಳನೀರು : ಎಳನೀರು ಹಾಗೂ ತೆಂಗಿನಕಾಯಿ ನೀರು ಹೊಟ್ಟೆಯಲ್ಲಿರುವ ಅಲ್ಸರ್ ಕಡಿಮೆ ಮಾಡುತ್ತದೆ. ಇದ್ರ ಜೊತೆಗೆ ಹೊಟ್ಟೆಯಲ್ಲಿರುವ ಹುಳವನ್ನು ಕೊಲ್ಲುತ್ತದೆ. ಹಾಗಾಗಿ ಎಳನೀರನ್ನು ಹೆಚ್ಚಾಗಿ ಸೇವನೆ ಮಾಡಿ.

ಬಾಳೆಹಣ್ಣು : ಇದ್ರಲ್ಲಿ ಎಂಟಿಬ್ಯಾಕ್ಟಿರಿಯಲ್ ಅಂಶವಿರುತ್ತದೆ. ಇದು ಹೊಟ್ಟೆಯಲ್ಲಿರುವ ಆಮ್ಲವನ್ನು ಕಡಿಮೆ ಮಾಡುತ್ತದೆ. ಹೊಟ್ಟೆ ಹುಣ್ಣಿನಿಂದ ಬಳಲುವ ವ್ಯಕ್ತಿಗೆ ಬಾಳೆಹಣ್ಣು ಸೇವನೆ ಮಾಡಲು ನೀಡುವುದು ಒಳ್ಳೆಯದು.

ಬದಾಮಿ : ಬದಾಮಿಯನ್ನು ರುಬ್ಬಿ ಅಲ್ಸರ್ ರೋಗವಿರುವವರು ಸೇವನೆ ಮಾಡಬೇಕು.

ಬೆಳ್ಳುಳ್ಳಿ : ಮೂರು ಬೆಳ್ಳುಳ್ಳಿ ಎಸಳನ್ನು ಪೇಸ್ಟ್ ಮಾಡಿ ನೀರಿಗೆ ಬೆರೆಸಿ ಕುಡಿಯುವುದರಿಂದ ಅಲ್ಸರ್ ನಿಯಂತ್ರಣಕ್ಕೆ ಬರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...