
ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಮಾರ್ಕೆಟ್ನಲ್ಲಿ ನಾನಾ ಬಗೆಯ ಅಸ್ತ್ರಗಳು ಲಭ್ಯವಿದೆ. ಈ ಎಲ್ಲದರ ನಡುವೆ ಟ್ವಿಟರ್ ಬಳಕೆದಾರರೊಬ್ಬರು ಉಪ್ಪು ಹಾಗೂ ಟಕೀಲಾ ಬಳಸಿ ಸೊಳ್ಳೆಗಳನ್ನ ಹೇಗೆ ಹೊಡೆದೋಡಿಸಬಹುದು ಎಂಬ ಮಾಸ್ಟರ್ ಪ್ಲಾನ್ ಒಂದನ್ನ ಕಂಡು ಹಿಡಿದಿದ್ದಾರೆ.
BREAKING: ಕೊರೋನಾಗೆ ಕಡಿವಾಣ ಹಾಕಲು ಮತ್ತೊಂದು ಅಸ್ತ್ರ ರೆಡಿ
ಈ ಮಹಿಳೆ ಹೊಸ ಪ್ಲಾನ್ನ್ನು ಈ ರೀತಿ ವಿವರಿಸಿದ್ದಾರೆ : ಸೊಳ್ಳೆಯು ಸಕ್ಕರೆ ಎಂದುಕೊಂಡು ಉಪ್ಪಿನ ಮೇಲೆ ಕುಳಿತುಕೊಳ್ಳುತ್ತದೆ. ಉಪ್ಪು ದೇಹಕ್ಕೆ ಹೋದ ಬಳಿಕ ಅದಕ್ಕೆ ಬಾಯಾರಿಕೆಯಾಗುತ್ತೆ. ಆಗ ನೀರು ಎಂದುಕೊಂಡು ಟಕೀಲಾವನ್ನ ಸೇವನೆ ಮಾಡುತ್ತದೆ. ಎಣ್ಣೆ ಸೇವನೆ ಮಾಡಿದ ಬಳಿಕ ಅದಕ್ಕೆ ತಲೆತಿರುಗಲು ಆರಂಭವಾಗುತ್ತದೆ ಹಾಗೂ ಅದು ಹತ್ತಿರದಲ್ಲೇ ಇರುವ ಕಲ್ಲಿಗೆ ತಲೆ ಬಡಿದುಕೊಂಡು ಸತ್ತೇ ಹೋಗುತ್ತೆ ಎಂದು ಬರೆದಿದ್ದಾರೆ. ಈ ಟ್ವೀಟ್ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.