alex Certify ‘ಸೋಂಪು’ ತಿನ್ನುವುದರಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸೋಂಪು’ ತಿನ್ನುವುದರಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ

ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಊಟ ಮುಗಿಸಿದ ಬಳಿಕ ಬಿಲ್ ಜೊತೆ ಸೋಂಪು ಕಾಳು ಕೊಡುವುದನ್ನು ನೋಡಿದ್ದೇವೆ. ಆದರೆ ಅದರ ಹಿಂದಿರುವ ಉದ್ದೇಶ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಕಾರಣ ತಿಳಿದರೆ ನೀವೂ ಪ್ರತಿ ದಿನ ಸೋಂಪು ಕಾಳು ಉಪಯೋಗಿಸುವುದರಲ್ಲಿ ಸಂಶಯವಿಲ್ಲ.

* ಸೋಂಪು ಕಾಳನ್ನು ಪ್ರತಿದಿನ ಊಟವಾದ ಬಳಿಕ ಒಂದೆರಡು ಚಮಚ ತಿನ್ನುವುದರಿಂದ ಅಜೀರ್ಣ ಸಮಸ್ಯೆ ಕಾಡುವುದಿಲ್ಲ. ಊಟದ ನಂತರ ತಿನ್ನುವುದರಿಂದ ಬಾಯ ವಾಸನೆಯೂ ಕಮ್ಮಿಯಾಗುತ್ತದೆ.

* ಸೋಂಪು ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಆ ನೀರಿನಿಂದ ಕಣ್ಣುಗಳನ್ನು ತೊಳೆಯುವುದರಿಂದ ಕಣ್ಣಿನ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ.

* ಸೋಂಪನ್ನು ನೀರಿನಲ್ಲಿ ಕುದಿಸಿ, ಅದರ ಡಿಕಾಕ್ಷನ್‌ ತಯಾರಿಸಿ ಕುಡಿಯುವುದರಿಂದ ಮಹಿಳೆಯರಲ್ಲಿ ಋುತುಚಕ್ರದ ದಿನಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹೊಟ್ಟೆ ನೋವು ಮತ್ತು ಇತರ ತೊಂದರೆ ನಿವಾರಣೆಯಾಗುತ್ತದೆ. ಜೊತೆಗೆ ನಿಯಮಿತವಾಗಿ ಋುತುಚಕ್ರವಾಗುತ್ತದೆ.

* ಇದು ಮಕ್ಕಳಿಗೂ ಒಳ್ಳೆಯದು. ಮಕ್ಕಳಲ್ಲಿ ಉಂಟಾಗುವ ಉದರ ತೊಂದರೆಗಳ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

* ಮಕ್ಕಳಲ್ಲಿ ಅಜೀರ್ಣ ಸಮಸ್ಯೆ ಕಾಡುತ್ತಿದ್ದರೆ ಒಂದು ಚಮಚ ಸೋಂಪು ಕಾಳುಗಳನ್ನು ಜಗಿಯಲು ನೀಡಬೇಕು. ಸೋಂಪು ಕಾಳುಗಳನ್ನು ಜಗಿದು ನುಂಗುವುದರಿಂದ ಪರಿಹಾರ ಸಿಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...