alex Certify ‘ಸ್ಟ್ರೇಂಜರ್​ ಥಿಂಗ್ಸ್ ​ನಿಂದ ಪ್ರೇರಿತಗೊಂಡು ಹ್ಯಾಲೋವೀನ್​ ಡೆಕೋರೇಷನ್​; ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸ್ಟ್ರೇಂಜರ್​ ಥಿಂಗ್ಸ್ ​ನಿಂದ ಪ್ರೇರಿತಗೊಂಡು ಹ್ಯಾಲೋವೀನ್​ ಡೆಕೋರೇಷನ್​; ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಈ ವಿಡಿಯೋ

ಹ್ಯಾಲೋವೀನ್​ ಆಚರಣೆಗೆ ಒಂದು ತಿಂಗಳಿಗಿಂತ ಹೆಚ್ಚು ಸಮಯವಿದೆ. ಆದರೆ ಜನರು ಈಗಾಗಲೇ ಅದನ್ನು ಸಂಭ್ರಮಿಸಲು ಪ್ರಾರಂಭಿಸಿದ್ದಾರೆ ಮತ್ತು ಅದೂ ಸಹ ನಂಬಲಾಗದಷ್ಟು ಸೃಜನಶೀಲ ರೀತಿಯಲ್ಲಿ.

ಯುಎಸ್​ನ ದಂಪತಿ ತಮ್ಮ ಸ್ಪೂಕಿ ಅಲಂಕಾರಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಅವರು ಪ್ರಸಿದ್ಧ ನೆಟ್​ಫ್ಲಿಕ್ಸ್​ ಸರಣಿಯಾದ ಸ್ಟ್ರೇಂಜರ್​ ಥಿಂಗ್ಸ್​ನಿಂದ ಸ್ಫೂರ್ತಿ ಪಡೆದು, ಗಾಳಿಯಲ್ಲಿ ತೇಲುವ ಮಹಿಳೆಯ ಪ್ರತಿಕೃತಿಯನ್ನು ಹಾರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್​ ಆಗಿದ್ದು, 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಟ್ವಿಟ್ಟರ್​ನಲ್ಲಿ ದಿ ಘೌಲಿಘನ್ಸ್​ ಎಂಬ ಪೇಜ್​ ವಿಡಿಯೋ ಹಂಚಿಕೊಂಡಿದೆ. ಇದನ್ನು ಮೂಲತಃ ಆಬ್ರೆ ಮತ್ತು ಡೇವ್​ ಅವರು ಟಿಕ್​ಟಾಕ್​ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದವರಿಗೆ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುವುದು ಸಹಜ.

ಸ್ಟ್ರೇಂಜರ್​ ಥಿಂಗ್ಸ್​ ನೆಟ್​ಫ್ಲಿಕ್ಸ್​ ಹಾರರ್​ ಸರಣಿಯಾಗಿದೆ. ಇದರ ಮೊದಲ ಸಂಚಿಕೆ ಜುಲೈ 15, 2016 ರಂದು ಪ್ರಸಾರವಾಯಿತು. ಇದರಲ್ಲಿ ಮಿಲ್ಲಿ ಬಾಬಿ ಬ್ರೌನ್​, ಗ್ಯಾಟೆನ್​ ಮ್ಯಾಟರಾಝೊ ಮತ್ತು ಫಿನ್​ ಮೋಲ್ಫರ್ಡ್​ ಮುಂತಾದವರು ನಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...