ಹ್ಯಾಲೋವೀನ್ ಆಚರಣೆಗೆ ಒಂದು ತಿಂಗಳಿಗಿಂತ ಹೆಚ್ಚು ಸಮಯವಿದೆ. ಆದರೆ ಜನರು ಈಗಾಗಲೇ ಅದನ್ನು ಸಂಭ್ರಮಿಸಲು ಪ್ರಾರಂಭಿಸಿದ್ದಾರೆ ಮತ್ತು ಅದೂ ಸಹ ನಂಬಲಾಗದಷ್ಟು ಸೃಜನಶೀಲ ರೀತಿಯಲ್ಲಿ.
ಯುಎಸ್ನ ದಂಪತಿ ತಮ್ಮ ಸ್ಪೂಕಿ ಅಲಂಕಾರಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. ಅವರು ಪ್ರಸಿದ್ಧ ನೆಟ್ಫ್ಲಿಕ್ಸ್ ಸರಣಿಯಾದ ಸ್ಟ್ರೇಂಜರ್ ಥಿಂಗ್ಸ್ನಿಂದ ಸ್ಫೂರ್ತಿ ಪಡೆದು, ಗಾಳಿಯಲ್ಲಿ ತೇಲುವ ಮಹಿಳೆಯ ಪ್ರತಿಕೃತಿಯನ್ನು ಹಾರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಟ್ವಿಟ್ಟರ್ನಲ್ಲಿ ದಿ ಘೌಲಿಘನ್ಸ್ ಎಂಬ ಪೇಜ್ ವಿಡಿಯೋ ಹಂಚಿಕೊಂಡಿದೆ. ಇದನ್ನು ಮೂಲತಃ ಆಬ್ರೆ ಮತ್ತು ಡೇವ್ ಅವರು ಟಿಕ್ಟಾಕ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದವರಿಗೆ ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡುವುದು ಸಹಜ.
ಸ್ಟ್ರೇಂಜರ್ ಥಿಂಗ್ಸ್ ನೆಟ್ಫ್ಲಿಕ್ಸ್ ಹಾರರ್ ಸರಣಿಯಾಗಿದೆ. ಇದರ ಮೊದಲ ಸಂಚಿಕೆ ಜುಲೈ 15, 2016 ರಂದು ಪ್ರಸಾರವಾಯಿತು. ಇದರಲ್ಲಿ ಮಿಲ್ಲಿ ಬಾಬಿ ಬ್ರೌನ್, ಗ್ಯಾಟೆನ್ ಮ್ಯಾಟರಾಝೊ ಮತ್ತು ಫಿನ್ ಮೋಲ್ಫರ್ಡ್ ಮುಂತಾದವರು ನಟಿಸಿದ್ದಾರೆ.