alex Certify ಸೋಶಿಯಲ್ ಮೀಡಿಯಾದಲ್ಲಿ ‘ಬರಸೋ ರೆ ಬರಸೋ‘ ಡಾನ್ಸ್ ವೈರಲ್: 21.6 ಮಿಲಿಯನ್ ವೀಕ್ಷಣೆ ಪಡೆದ ಫನ್ನಿ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಶಿಯಲ್ ಮೀಡಿಯಾದಲ್ಲಿ ‘ಬರಸೋ ರೆ ಬರಸೋ‘ ಡಾನ್ಸ್ ವೈರಲ್: 21.6 ಮಿಲಿಯನ್ ವೀಕ್ಷಣೆ ಪಡೆದ ಫನ್ನಿ ವಿಡಿಯೋ

ಇದು ಸೋಶಿಯಲ್ ಮೀಡಿಯಾ ಜಮಾನಾ, ಕ್ಷಣ ಕ್ಷಣಕ್ಕೂ ಒಂದಿಲ್ಲ ಒಂದು ಹೊಸತನ ನೋಡುವುದಕ್ಕೆ ಸಿಗುತ್ತೆ. ಎಷ್ಟೋ ಜನರು ಈ ಸೋಶಿಯಲ್ ಮೀಡಿಯಾ ತಮ್ಮ ಟ್ಯಾಲೆಂಟ್ ತೋರಿಸೋ ವೇದಿಕೆಯನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಇನ್ನು ಕೆಲವರು ಇದೇ ಸೋಶಿಯಲ್ ಮೀಡಿಯಾನ್ನ ತಮ್ಮ ಹುಚ್ಚಾಟಗಳನ್ನ ತೋರಿಸಿ ಜನರಿಗೆ ಎಂಟರ್‌ಟೈನ್‌ ಮಾಡಿದ್ದಾರೆ. ಅಂತಹದ್ದೆ ಹುಚ್ಚಾಟದ ವಿಡಿಯೋ ಒಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಹೆಜ್ಜೆ ಹಾಕಿರುವ ಬರಸೊರೇ, ಮೇಘಾ ಬರಸೋ…… ಅನ್ನೋ ಹಾಡಿಗೆ, ಈ ಸುಂದರಿ ಕುಣಿದ ರೀತಿಗೆ ಅಭಿಮಾನಿಗಳು ಫಿದಾ ಆಗಿ ಹೋಗಿದ್ದರು. ಈಗ ಇದೇ ಹಾಡಿಗೆ ಮೂವರು ಮಹಾನುಭಾವರು ಸ್ಟೆಪ್ಸ್ ಹಾಕಿದ್ದಾರೆ. ಇವರ ಈ ಫನ್ನಿ ಡಾನ್ಸ್ ನೋಡಿ ನೆಟ್ಟಿಗರು ಎಂಜಾಯ್ ಮಾಡ್ಕೊಂಡು ಹೊಟ್ಟೆ ಹುಣ್ಣಾಗುವ ಹಾಗೆ ನಗ್ತಾ ಇದ್ದಾರೆ.

90ರ ದಶಕದಲ್ಲಿ ಮಕ್ಕಳು ಶಾಲೆಯ ವಾರ್ಷಿಕೋತ್ಸವದಲ್ಲಿ ಡಾನ್ಸ್ ಮಾಡುವ ದಿನಗಳು ನೆನಪಾಗಿ ಬಿಡುತ್ತೆ. ಈ ವಿಡಿಯೋವನ್ನ ಹರಿ ಮುನಿಯಪ್ಪ ಮತ್ತು ವಿಕ್ಲಾಸ್ ವಿಕ್ರಮ್ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈಗಾಗಲೇ ಈ ವಿಡಿಯೋವನ್ನ ಸುಮಾರು 21.6 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಸಖತ್‌ ಫನ್ನಿಯಾಗಿದ್ದರೂ ಎಂಟರ್‌ಟೈನ್‌ ಮಾಡ್ತಿದೆ ಈ ವಿಡಿಯೋ.

ಈ ವಿಡಿಯೋ ನೋಡಿ ನೆಟ್ಟಿಗರು ಕಾಮೆಂಟ್‌ ಮೇಲೆ ಕಾಮೆಂಟ್‌ ಹಾಕ್ತಿದ್ದಾರೆ. ಅದೆಷ್ಟೋ ಜನರಿಗೆ ಈ ವಿಡಿಯೋ ತಮ್ಮ ಬಾಲ್ಯದ ದಿನಗಳನ್ನ ನೆನಪು ಮಾಡಿದೆ ಅಂತ ಕಾಮೆಂಟ್‌ ಹಾಕಿದ್ದಾರೆ. ಇನ್ನೂ ಕೆಲವರು ಬಾಲ್ಯದಲ್ಲಿ ತಾವು ಕೂಡಾ ಹೀಗೆಯೇ ಸ್ಟೆಪ್ಸ್ ಹಾಕಿದ್ದೇವು ಅಂತ ತಮಾಷೆಯ ಮೆಸೇಜ್‌ ಹಾಕಿದ್ದಾರೆ. ಇನ್ನೊಬ್ಬರಂತೂ ಇವರು ಡಾನ್ಸ್‌ ಮಾಡ್ತಿರೋದು ಕೆಟ್ಟದಾಗಿದ್ರೂ ನನಗೆ ಸಖತ್‌ ನಗಿಸಿದೆ ಅಂತ ಕೂಡಾ ಹೇಳಿಕೊಂಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...