alex Certify ದಂಗಾಗಿಸುವಂತಿದೆ ಯುವಕ ಮಾಡಿದ ಸಾಹಸ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುವಂತಿದೆ ಯುವಕ ಮಾಡಿದ ಸಾಹಸ….!

ಪ್ಯಾರಿಸ್: ಕೆಲವೊಂದು ವ್ಯಕ್ತಿಗಳಿಗೆ ಏನನ್ನಾದರೂ ವಿಭಿನ್ನವಾಗಿ ಸಾಧಿಸಬೇಕೆನ್ನುವ ತುಡಿತ. ಅದರಲ್ಲಿ ಕೆಲವು ಎತ್ತರದ ಕಟ್ಟಡಗಳನ್ನೇರುವುದು ಮುಂತಾದ ಸಾಹಸ ಮಾಡಲು ಮುಂದಾಗುತ್ತಾರೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಕೂಡ ಯಾವುದೇ ಮುಂಜಾಗೃತಾ ಕ್ರಮಗಳಿಲ್ಲದೆ ಕಟ್ಟಡದಿಂದ ಕಟ್ಟಡಕ್ಕೆ ಹಾರಿರುವ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ಯಾರಿಸ್ ಮೂಲದ ಬೆನ್ ಕ್ಯಾಂಟೆ ಎಂಬಾತನೆ ಸಾಹಸ ಮಾಡಲು ಮುಂದಾದವ. ಯಾವುದೇ ಸುರಕ್ಷತಾ ಸಾಧನಗಳನ್ನು ಬಳಸದೆ ಅಪಾಯಕಾರಿ ಕಟ್ಟಡದಲ್ಲಿ ತನ್ನ ಸಾಹಸ ಪ್ರದರ್ಶನ ಮಾಡಿದ್ದಾನೆ. ಬಹು ಅಂತಸ್ತಿನ ಕಟ್ಟಡದ ಎತ್ತರದಿಂದ ಬೀಳುವಂತೆ ನಟಿಸಿದ್ದಾನೆ. ಈ ಸಾಹಸವು ಭಾರಿ ಅಪಾಯಕಾರಿಯಾಗಿದೆ. ಅಷ್ಟೇ ಅಲ್ಲ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಲೀಲಾಜಾಲವಾಗಿ ಜಂಪ್ ಮಾಡಿದ್ದಾನೆ.

ಭಾರತದ ನಾಗರಿಕರಾಗಿದ್ದರೆ ಸುಲಭವಾಗಿ ಪಡೆಯಿರಿ ‘ಪಡಿತರ ಚೀಟಿ’

ಸದ್ಯ ಈತ ತನ್ನ ಸಾಹಸದ ವಿಡಿಯೊವನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋದಲ್ಲಿ ಚಾರ್ಲಿ ಚಾಪ್ಲಿನ್ ಅವರ ಹಿನ್ನೆಲೆ ಸಂಗೀತವನ್ನು ಬಳಸಿಕೊಳ್ಳಲಾಗಿದೆ.

ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಸಾಹಸ ಮಾಡಿದ್ದರ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಒಬ್ಬರು ತಾನು ದ್ವೇಷಿಸುವುದಾಗಿ ಕಮೆಂಟ್ ಮಾಡಿದ್ದಾರೆ. ಅಲ್ಲದೆ ಛಾವಣಿಯಲ್ಲಿ ಹಾರುವುದು ಭಯವನ್ನುಂಟು ಮಾಡುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಅವನು ಮಾಡಿದ ಮೊದಲ ತಪ್ಪು ಅದೇ ಕೊನೆಯದಾಗಲಿದೆ ಅಂತಾ ಎಚ್ಚರಿಸಿದ್ದಾರೆ. ಹೀಗೆ ಈ ವಿಡಿಯೋಗೆ ಸಾವಿರಾರು ಋಣಾತ್ಮಕ ಕಮೆಂಟ್ ಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...