ಶಾಸ್ತ್ರದಲ್ಲಿ ದಿನನಿತ್ಯ ಮಾಡುವ ಪ್ರತಿಯೊಂದು ಕೆಲಸಕ್ಕೂ ಪದ್ಧತಿ, ನಿಯಮಗಳನ್ನು ಮಾಡಲಾಗಿದೆ.
ಅದ್ರಂತೆ ನಡೆದುಕೊಂಡಲ್ಲಿ ಸುಖ-ಸಮೃದ್ಧಿ ಜೊತೆಗೆ ಬಡತನ ದೂರವಾಗಿ ನೆಮ್ಮದಿ ಪ್ರಾಪ್ತಿಯಾಗುತ್ತದೆ.
ಬೆಳಗಿನ ಸಮಯದಲ್ಲಿ ಕೆಲಸದ ಒತ್ತಡದಲ್ಲಿರುವ ಅನೇಕರು ರಾತ್ರಿ ಉಗುರು ಕತ್ತರಿಸುತ್ತಾರೆ. ಇದನ್ನು ಅಪಶಕುನವೆಂದು ಪರಿಗಣಿಸಲಾಗಿದೆ.
ರಾತ್ರಿ ಉಗುರು ಕತ್ತರಿಸಿದ್ರೆ ಲಕ್ಷ್ಮಿ ಮುನಿಸಿಕೊಂಡು ಮನೆ ಬಿಟ್ಟು ಹೋಗುತ್ತಾಳೆಂಬ ನಂಬಿಕೆಯಿದೆ.
ಗುರುವಾರ ದೇವಾನುದೇವತೆಗಳ ಗುರುವಿನ ದಿನವಾಗಿದೆ. ಅಂದು ಕ್ಷೌರ ಮಾಡಬಾರದು. ಗುರುವಾರ ಕ್ಷೌರ ಮಾಡಿದ್ರೆ ಭಾಗ್ಯ ಲಭಿಸುವುದಿಲ್ಲ. ಕ್ಷೌರ ಮಾಡಲು ರವಿವಾರ, ಸೋಮವಾರ, ಬುಧವಾರ, ಶುಕ್ರವಾರ ಒಳ್ಳೆಯದು. ಮಂಗಳವಾರ, ಗುರುವಾರ, ಶನಿವಾರ ಮರೆತೂ ಈ ಕೆಲಸವನ್ನು ಮಾಡಬಾರದು.
ಸೂರ್ಯ ಮುಳುಗಿದ ನಂತ್ರ ತುಳಸಿಯನ್ನು ಸ್ಪರ್ಶಿಸಬಾರದು. ಮಧ್ಯಾಹ್ನ 1 ಗಂಟೆ ನಂತ್ರ ತುಳಸಿಯನ್ನು ಕೀಳಬಾರದು. ಹಾಗೆ ಸೂರ್ಯಾಸ್ತವಾಗ್ತಿದ್ದಂತೆ ತುಳಸಿ ಗಿಡವನ್ನು ಮುಟ್ಟಬಾರದು.
ಸಂಜೆ ಹೊತ್ತಿನಲ್ಲಿ ನಿದ್ರೆ ಮಾಡಬಾರದು. ಯಾರು ನಿಯಮಿತವಾಗಿ ಸಂಜೆ ಸಮಯದಲ್ಲಿ ನಿದ್ರೆ ಮಾಡ್ತಾರೋ ಅವರು ಸ್ಥೂಲಕಾಯತೆಯಿಂದ ಬಳಲುತ್ತಾರೆ. ಆರೋಗ್ಯವಂತ ವ್ಯಕ್ತಿಗಳು ಸಂಜೆ ನಿದ್ರೆ ಮಾಡಬಾರದು. ಸೋಮಾರಿತನ ಹೆಚ್ಚಾಗುತ್ತದೆ ಜೊತೆಗೆ ಮನೆಯಲ್ಲಿ ಲಕ್ಷ್ಮಿ ವಾಸ ಮಾಡುವುದಿಲ್ಲ.
ಸಂಜೆ ವೇಳೆಯಲ್ಲಿ ಎಂದೂ ಸ್ತ್ರೀಗೆ ಅವಮಾನ ಮಾಡಬಾರದು. ಮನೆಯೊಳಗಿರಲಿ ಇಲ್ಲ ಮನೆ ಹೊರಗಿರಲಿ ಸಂಜೆ ಸಮಯದಲ್ಲಿ ಮಹಿಳೆ ಜೊತೆ ಶಾಂತವಾಗಿ ವರ್ತಿಸಬೇಕು. ಸ್ತ್ರೀಗೆ ಅವಮಾನ ಮಾಡುವುದು ಪಾಪವೆಂದು ಪರಿಗಣಿಸಲಾಗಿದೆ.
ಸಂಜೆ ವೇಳೆ ಮದ್ಯ, ಡ್ರಗ್ಸ್ ಸೇವನೆ ಮಾಡಬಾರದು. ಮದ್ಯ ಸೇವನೆ ಯಾವಾಗ್ಲೂ ಒಳ್ಳೆಯದಲ್ಲ. ಅದ್ರಲ್ಲೂ ಸಂಜೆ ಮದ್ಯಪಾನ ಮಾಡಿದ್ರೆ ದೇಹ ದುರ್ಬಲವಾಗುತ್ತದೆ. ನಶೆಯ ಕಾರಣ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಎಲ್ಲವೂ ತಪ್ಪಾಗುತ್ತದೆ.