ನಾವು ತಿನ್ನುವ ಜಂಕ್ ಫುಡ್, ವ್ಯಾಯಾಮ ಇಲ್ಲದಿರುವಿಕೆ ಇತ್ಯಾದಿಗಳಿಂದ ದೇಹದಲ್ಲಿ ಕೊಬ್ಬಿನಾಂಶ ಸೇರಿಕೊಳ್ಳುತ್ತದೆ. ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ ದೇಹದ ಆರೋಗ್ಯಕ್ಕೆ ಕುತ್ತು. ಇದರಿಂದ ಹೃದಯಾಘಾತದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತದೆ.
ನಿಯಮಿತವಾದ ಆಹಾರ, ತರಕಾರಿ, ಹಣ್ಣುಗಳನ್ನು ಸೇವಿಸುವುದರಿಂದ ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಲು ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.
*ಓಟ್ಸ್ ನಲ್ಲಿ ನಾರಿನಂಶ ಜಾಸ್ತಿ ಇರುತ್ತದೆ. ಇದನ್ನು ಸೇವಿಸುವುದರಿಂದ ಎಲ್ ಡಿಎಲ್ ಪ್ರಮಾಣವನ್ನು 5-10% ನಷ್ಟು ಕಡಿಮೆ ಮಾಡುತ್ತದೆ.
*ಬೆರ್ರಿಸ್ ನಲ್ಲಿ ನಾರಿನಾಂಶ ಹೆಚ್ಚಿರುತ್ತದೆ ಹಾಗೇ ಇದು ಆ್ಯಂಟಿ ಆಕ್ಸಿಡೆಂಟ್ ಕೂಡ ಹೌದು. ಇದು ಎಚ್ ಡಿ ಎಲ್ ಅನ್ನು ಹೆಚ್ಚಿಸುತ್ತದೆ. ಹೃದಯದ ರಕ್ಷಣೆಯನ್ನು ಮಾಡುತ್ತದೆ. ದಿನಕ್ಕೆ 1 ½ ಕಪ್ ನಷ್ಟು ಹಣ್ಣು ಹಾಗೂ 3 ಕಪ್ ನಷ್ಟು ತರಕಾರಿಗಳನ್ನು ಸೇವಿಸಿ. ಹಾಗೂ ಹಣ್ಣು ಹಾಗೂ ತರಕಾರಿಗಳನ್ನು ತಿನ್ನುವಾಗ ಅದಕ್ಕೆ ಉಪ್ಪು ಅಥವಾ ಸಕ್ಕರೆಯನ್ನು ಸೇರಿಸಿಕೊಳ್ಳಬೇಡಿ.
*ಬೆಣ್ಣೆಹಣ್ಣು(ಅವಕಾಡೋ) ಇದು ಅಧಿಕ ರಕ್ತದೊತ್ತಡ ಇರುವವರಿಗೆ ತುಂಬಾ ಒಳ್ಳೆಯ ಹಣ್ಣು. ಇದರಲ್ಲಿ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಕೆ, ಸಿ, ಬಿ5, ಬಿ6, ಇ ಹೆಚ್ಚಿರುತ್ತದೆ. ಇದು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಕೂಡ ನಿಯಂತ್ರಣದಲ್ಲಿಡುತ್ತದೆ.
*ಟೊಮೆಟೊದಲ್ಲಿ ವಿಟಮಿನ್ ಎ, ಬಿ, ಕೆ ಮತ್ತು ಸಿ ಇದೆ. ನಿಮ್ಮ ಚರ್ಮ, ಕಣ್ಣು ಹಾಗೂ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಕಡಿಮೆ ಮಾಡುವುದಲ್ಲದೇ, ಪಾರ್ಶ್ವವಾಯು ಆಗದಂತೆ ತಡೆಯುತ್ತದೆ.
*ಪಪ್ಪಾಯ ಕೂಡ ಅಧಿಕ ನಾರಿನಾಂಶವಿರುವ ಹಣ್ಣು, ರಕ್ತದೊತ್ತಡವನ್ನು ಕಡಿಮೆ ಮಾಡುವುದರ ಜತೆಗೆ ಎಲ್ ಡಿಎಲ್ ಕೊಲೆಸ್ಟ್ರಾಲ್ ಅನ್ನು ಕೂಡ ನಿಯಂತ್ರಣದಲ್ಲಿಡುತ್ತದೆ, ಇದು ಜೀರ್ಣಕ್ರೀಯೆಗೆ ಸಹಾಯಕಾರಿ ಕೂಡ ಹೌದು.